Advertisement

ನವದೆಹಲಿ ಜಗತ್ತಿನ ನಂ.1 ಕಲುಷಿತ ರಾಜಧಾನಿ! ಸತತ 3ನೇ ಬಾರಿಗೆ ಈ ಅಪಖ್ಯಾತಿ

08:30 PM Mar 17, 2021 | Team Udayavani |

ನವದೆಹಲಿ: ಜಗತ್ತಿನ ನಂ.1 “ಕಲುಷಿತ ರಾಜಧಾನಿ’ ಎಂಬ ಕುಖ್ಯಾತಿಗೆ ನವದೆಹಲಿ ಪಾತ್ರವಾಗಿದೆ. ಸತತ 3ನೇ ಬಾರಿಗೆ ರಾಷ್ಟ್ರಧಾನಿ ಈ ಅಪಖ್ಯಾತಿ ಲಭಿಸಿದೆ.

Advertisement

ಐಕ್ಯೂಏರ್‌ ಎಂಬ ಸ್ವಿಜರ್ಲೆಂಡ್‌ ನ ಸಂಸ್ಥೆ ವಿಶ್ವ ವಾಯು ಗುಣಮಟ್ಟ ಸೂಚ್ಯಂಕ ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜಧಾನಿ ಸುತ್ತಮುತ್ತಲಿನ ಕೂಳೆ ಸುಡುವಿಕೆಯೇ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ ಎಂದು ಹೇಳಿದೆ.

“2019ಕ್ಕೆ ಹೋಲಿಸಿದರೆ 2020ರಲ್ಲಿ ದೆಹಲಿಯ ವಾಯು ಗುಣಮಟ್ಟದಲ್ಲಿ ಶೇ.15ರಷ್ಟು ಸುಧಾರಣೆ ಕಂಡಿದೆ. ಇದರ ಹೊರತಾಗಿಯೂ, ಜಗತ್ತಿನ 10 ಮಾಲಿನ್ಯ ನಗರಿಗಳಲ್ಲಿ ನವದೆಹಲಿಯೂ ಒಂದಾಗಿದೆ ಮತ್ತು ಜಗತ್ತಿನ ನಂ.1 ಮಾಲಿನ್ಯಯುಕ್ತ ರಾಜಧಾನಿ ಇದಾಗಿದೆ’ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ :ಪಾಳುಬಿದ್ದ ಕಂಟೋನ್ಮೆಂಟ್‌ ರೈಲು ನಿಲ್ದಾಣಕ್ಕೆ ಹೊಸ ಕಳೆ

ವಾಯುಮಾಲಿನ್ಯ ವಿಚಾರದಲ್ಲಿ ಭಾರತವೂ ಹಿಂದುಳಿದಿಲ್ಲ. ವಿಶ್ವದ 106 ರಾಷ್ಟ್ರಗಳ ಪೈಕಿ ಅತಿಕಳಪೆ ಗಾಳಿ ಗುಣಮಟ್ಟ ಹೊಂದಿದ 3ನೇ ರಾಷ್ಟ್ರ ಭಾರತವಾಗಿದೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next