ನವದೆಹಲಿ: 2021ನೇ ಸಾಲಿನ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ರಾಷ್ಟ ರಾಜಧಾನಿ ದೆಹಲಿಯು 62ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಭಾರತದಿಂದ ಆಯ್ಕೆಯಾದ ಏಕೈಕ ನಗರ ಎಂದು ಕರೆಸಿಕೊಂಡಿದೆ.
ವಿಶ್ವದ ಒಟ್ಟು 100 ಅತ್ಯುತ್ತಮ ನಗರಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ದೆಹಲಿಯನ್ನು ಒಳಗೊಂಡಂತೆ ಸ್ಯಾನ್ ಫ್ರಾನ್ಸಿಸ್ಕೊ, ಆಮ್ ಸ್ಟರ್ ಡ್ಯಾಂ, ರೋಮ್, ವಾಷಿಂಗ್ಟನ್ ಡಿಸಿ, ಅಬುಧಾಬಿ, ಟೊರೊಂಟೊ ನಗರಗಳು ಆಯ್ಕೆಯಾಗಿವೆ.
ಆಯಾ ಪ್ರದೇಶದಲ್ಲಿರುವ ನಗರಗಳ ಅಭಿವೃದ್ಧಿ, ಪ್ರವಾಸಿಗರು ಮತ್ತು ಅಲ್ಲಿರುವ ಮೇಧಾವಿ ಜನರ ಆಧಾರದ ಮೇಲೆ ಈ ಸ್ಥಾನವನ್ನು ನೀಡಲಾಗುತ್ತದೆ.
ಇದನ್ನೂ ಓದಿ:BSY ಒತ್ತಡಕ್ಕೆ ಮಣಿದು ಅಂದು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿತ್ತು: ರೇಣುಕಾಚಾರ್ಯ
ಈ ಹಿನ್ನೆಲೆಯಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಟ್ವೀಟ್- ರೀ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಜನರಿಗೆ ಇದೊಂದು ಶುಭ ಸುದ್ದಿಯಾಗಿದ್ದು. ಈ ಫಲಿತಾಂಶದ ಹಿಂದೆ ಕಳೆದ 6 ವರ್ಷಗಳ ಪರಿಶ್ರಮ ಅಡಗಿದೆ. ಇದು ದೆಹಲಿಯ ಧನಾತ್ಮಕ ಬದಲಾವಣೆಯನ್ನು ಸೂಚಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬ್ರ್ಯಾಂಡಿಂಗ್, ಮಾರ್ಕೆಟಿಂಗ್, ವಿನ್ಯಾಸ, ಪ್ರವಾಸೋದ್ಯಮ,ಡೇಟಾ ಮತ್ತು ಪ್ರಯಾಣ ವರದಿಗಳಲ್ಲಿ ಹೆಸರುವಾಸಿಯಾಗಿರುವ ವ್ಯಾಂಕೋವರ್ ಮೂಲದ ರೆಸೋನೆನ್ಸ್ ಕನ್ಸಲ್ಟೆನ್ಸಿ ಲಿಮಿಟೆಡ್ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ಕಳೆದ ವರ್ಷ ದೆಹಲಿ 81 ನೇ ಸ್ಥಾನ ಗಳಿಸಿಕೊಂಡಿತ್ತು. ಈ ವರ್ಷ ದೆಹಲಿ ತನ್ನ ಸ್ಥಾನದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಕೊಂಡಿದೆ.