Advertisement

ಡೆಲ್ಲಿ ಪಬ್ಲಿಕ್‌ ಸ್ಕೂಲ್‌: ಚೀನಿ ವರ್ಷಾಚರಣೆ ರದ್ದು

01:09 PM Aug 10, 2017 | Team Udayavani |

ಬೆಂಗಳೂರು: ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಚೀನಿ ವರ್ಷಾಚರಣೆ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲು ಶಾಲಾ ಆಡಳಿತ ಮಂಡಳಿ ತಿರ್ಮಾನಿಸಿದೆ. 

Advertisement

ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನ(ಉತ್ತರ) ಆಡಳಿತ ಮಂಡಳಿಯು ಆಗಸ್ಟ್‌ 11ರಂದು ಒಂದನೇ ತರಗತಿಯ ಎ, ಬಿ ಮತ್ತು ಸಿ ವಿಭಾಗದ ಮಕ್ಕಳಿಗೆ ಚೀನಾ ಹೊಸ ವರ್ಷಾಚರಣೆ ಸ್ಪರ್ಧೆ ಏರ್ಪಡಿಸಿ, ಆ.3ರಂದು ಸುತ್ತೋಲೆ ಹೊರಡಿಸಿದೆತ್ತು.

ಬ್ರಿಟಿಷ್‌ ಕೌನ್ಸಿಲ್‌ನ ಅಂತಾರಾಷ್ಟ್ರೀಯ ಶಾಲಾ ಪ್ರಶಸ್ತಿಗಾಗಿ ಮಕ್ಕಳಿಗೆ ಚೀನಿ ಹೊಸ ವರ್ಷ ಆಚರಣೆಯ ಸ್ಪರ್ಧೆ ನಡೆಸಲು ಮುಂದಾಗಿದ್ದ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ (ಉತ್ತರ) ಆಡಳಿತ ಮಂಡಳಿಯ ನಡೆ ಈಗ ಚರ್ಚೆಗೆ ಗ್ರಾಸವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next