ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಪದೇ ಪದೇ ಇಡಿ ನೋಟಿಸ್‌ಗಳನ್ನು ನಿರ್ಲಕ್ಷಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಕಷ್ಟಗಳು ಕಡಿಮೆಯಾದಂತೆ ಕಾಣುತ್ತಿಲ್ಲ.
ದೆಹಲಿ ಕ್ರೈಂ ಬ್ರಾಂಚ್ ತಂಡ ಶನಿವಾರ ಬೆಳಗ್ಗೆ ಮತ್ತೆ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಾಗಿಲು ಬಡಿದಿದೆ, ಆದರೆ ಈ ಬಾರಿ ಪೊಲೀಸರು ಬಂದಿರುವುದು ದೆಹಲಿಯ ಮದ್ಯ ಹಗರಣಕ್ಕೆ ಸಂಬಂಧಿಸಿಲ್ಲ ಬದಲಾಗಿ ಕೆಲವು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರ ಕುದುರೆ ವ್ಯಾಪಾರಕ್ಕೆ ಯತ್ನಿಸಿದ ಬಗ್ಗೆ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿ ಅತಿಶಿ ಅವರ ಆರೋಪದ ತನಿಖೆಗೆ ಸಂಬಂಧಿಸಿದ್ದಾಗಿದೆ ಎನ್ನಲಾಗಿದೆ.
ಇದಕ್ಕೂ ಮೊದಲು, ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡವು ಶುಕ್ರವಾರ ಸಂಜೆ ಉಭಯ ನಾಯಕರ ಅಧಿಕೃತ ನಿವಾಸಕ್ಕೆ ತೆರಳಿ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿಗೆ ಕೆಲವು ಆಮ್ ಆದ್ಮಿ ಪಕ್ಷದವರು ಕುದುರೆ ವ್ಯಾಪಾರಕ್ಕೆ ಯತ್ನಿಸಿದ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದರು. ಆದರೆ ದೆಹಲಿ ಪೊಲೀಸರು ಎಎಪಿ ನಾಯಕರಿಬ್ಬರಿಗೂ ನೋಟಿಸ್ ನೀಡಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಶನಿವಾರ ಬೆಳಗ್ಗೆ ಮತ್ತೆ ದೆಹಲಿ ಕ್ರೈಂ ಬ್ರಾಂಚ್ ತಂಡ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿ ನೋಟಿಸ್ ನೀಡಿತ್ತು.
ಜನವರಿ 30 ರಂದು, ಬಿಜೆಪಿ ನಾಯಕರು ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ಅವರ ಕುದುರೆ ವ್ಯಾಪಾರದ ಪ್ರಯತ್ನಗಳ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ದೂರು 6 ಪುಟಗಳಷ್ಟಿತ್ತು. ಈ ದೂರಿನ ನಂತರವೇ ಗುರುವಾರ ರಾತ್ರಿ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್‌ಗೆ ತನಿಖೆ ನಡೆಸುವಂತೆ ಸೂಚಿಸಲಾಗಿತ್ತು. ಇದರ ನಂತರ, ಕಾನೂನು ವಿಧಿವಿಧಾನಗಳು ಪೂರ್ಣಗೊಂಡ ನಂತರ, ಶುಕ್ರವಾರ ಸಂಜೆ, ಎಸಿಪಿ ನೇತೃತ್ವದ ದೆಹಲಿ ಪೊಲೀಸರ ತಂಡವು ವಿಚಾರಣೆಯ ಸೂಚನೆಯೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಮನೆಗೆ ತೆರಳಿ ನೊಟೀಸ್ ನೀಡಿದೆ.
ಇದನ್ನೂ ಓದಿ: Land Dispute: ಒಂದೇ ಕುಟುಂಬದ ಮೂವರ ಗುಂಡಿಕ್ಕಿ ಹತ್ಯೆ… CCTVಯಲ್ಲಿ ಭಯಾನಕ ದೃಶ್ಯ ಸೆರೆ