Advertisement

Delhi; ಮೋಸ್ಟ್ ವಾಂಟೆಡ್ ಹಿಜ್ಬುಲ್ ಉಗ್ರನನ್ನು ಬಂಧಿಸಿದ ದೆಹಲಿ ಪೊಲೀಸರು

05:30 PM Jan 04, 2024 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಹಿಜ್ಬುಲ್ ಮುಜಾಹಿದ್ದೀನ್‌ನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜಾವೇದ್ ಅಹ್ಮದ್ ಮಟ್ಟೂ ನನ್ನು ಗುರುವಾರ ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದೆ.

Advertisement

ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿರುವ ಆರೋಪವನ್ನು ಮಟ್ಟೂ ಹೊಂದಿದ್ದು, ಭದ್ರತಾ ಏಜೆನ್ಸಿಗಳ ಪಟ್ಟಿಯಲ್ಲಿ ಕಾಶ್ಮೀರ ಕಣಿವೆಯ ಟಾಪ್ 10 ಟಾರ್ಗೆಟ್ ಗಳಲ್ಲಿ ಒಬ್ಬನಾಗಿದ್ದ. ಆತನ ತಲೆಯ ಮೇಲೆ 5 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು.

ಮಟ್ಟೂ ಸೋಪೋರ್ ನಿವಾಸಿಯಾಗಿದ್ದು, ಹಲವು ಬಾರಿ ಪಾಕಿಸ್ಥಾನಕ್ಕೆ ಹೋಗಿ ಬಂದಿದ್ದ ಎನ್ನುವುದು ಖಚಿತವಾಗಿದೆ. ಕಳೆದ ವರ್ಷ, ಸ್ವಾತಂತ್ರ್ಯ ದಿನದ ಮೊದಲು, ಸೋಪೋರ್‌ನಲ್ಲಿರುವ ಮನೆಯಲ್ಲಿ ಮಟ್ಟೂ ನ ಸಹೋದರ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ವೀಡಿಯೊ ವೈರಲ್ ಆಗಿತ್ತು.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next