Advertisement

ಮೋದಿ ಸೋದರ ಸೊಸೆಯ ಪರ್ಸ್ ಕದ್ದ ಕಳ್ಳನ ಬಂಧಿಸಿದ ದೆಹಲಿ ಪೊಲೀಸರು

10:04 AM Oct 14, 2019 | Team Udayavani |

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಣ್ಣನ ಮಗಳ ಪರ್ಸ್ ಕದ್ದ ಕಳ್ಳನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನೋನು ಎಂಬಾತ ಬಂಧಿತ ವ್ಯಕ್ತಿ.

Advertisement

ಶನಿವಾರ ನರೇಂದ್ರ ಮೋದಿಯವರ ಅಣ್ಣನ ಮಗಳು ದಮಯಂತಿ ಬೆನ್ ಮೋದಿಯವರ ಪರ್ಸ್ ಅನ್ನು ಬೈಕಿನಲ್ಲಿ ಬಂದಿದ್ದ ಇಬ್ಬರು ಎಗರಿಸಿ ಪರಾರಿಯಾಗಿದ್ದರು.

ಕಳ್ಳರನ್ನು ಹಿಡಿಯಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯವಳಿಗಳನ್ನು ಪರಿಶೀಲನೆ ನಡೆಸಿದ್ದರು.

ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ದಮಯಂತಿ ಬೆನ್ ಅವರು ಆಟೋ ರಿಕ್ಷಾದಿಂದ ಇಳಿದು ಹೋಗುವಾಗ ದುಷ್ಕರ್ಮಿಗಳು ಪರ್ಸ್ ಎಗರಿಸಿದ್ದರು. ಆ ಪರ್ಸ್ ನಲ್ಲಿ 50 ಸಾವಿರ ಹಣ, ಎರಡು ಮೊಬೈಲ್ ಫೋನುಗಳು, ಮತ್ತು ಕೆಲವು ಅಗತ್ಯ ದಾಖಲೆಗಳು ಇದ್ದವು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next