Advertisement
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸತೀಶ್ ಕುಮಾರಿ (73ವರ್ಷ) ಅವರು ಕುರ್ಚಿಯಲ್ಲಿ ಕುಳಿತಿದ್ದು, ತಲೆ ಒಡೆದು ಹೋಗಿದ್ದು, ರಕ್ತದ ಮಡುವಿನಲ್ಲಿ ಸುತ್ತಿಗೆ ಬಿದ್ದಿರುವುದು ಕಂಡು ಬಂದಿರುವುದಾಗಿ ತಿಳಿಸಿದ್ದಾರೆ.
Related Articles
Advertisement
ನಂತರ ಕಿರಿಯ ಪುತ್ರ ಕೂಡಾ ಮನೆ ಬಳಿ ಬಂದ ನಂತರ, ಇಬ್ಬರೂ ಲಾಕ್ ಒಡೆದು ಮನೆಯೊಳಗೆ ಹೋದಾಗ, ಕುರ್ಚಿಯಲ್ಲಿಯೇ ಕುಸಿದು ಬಿದ್ದಿದ್ದು, ತಲೆ ಒಡೆದು ಹಾಕಿರುವುದು ಗಮನಕ್ಕೆ ಬಂದಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 302ರ ಪ್ರಕಾರ ಆರೋಪಿ ಮೊಮ್ಮಗ ಕರಣ್ (19ವರ್ಷ) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿ ಮೊಮ್ಮಗ ಕರಣ್ (ಹಿರಿಯ ಪುತ್ರ ಸಂಜಯ್ ಮಗ) ನನ್ನು ಬಂಧಿಸಲಾಗಿದ್ದು, ಕೊಲೆಗೆ ಉಪಯೋಗಿಸಿದ ಸುತ್ತಿಗೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಘಟನೆ ಶನಿವಾರ (ಡಿಸೆಂಬರ್ 26, 2020) ರಾತ್ರಿ ನಡೆದಿತ್ತು. ಆರೋಪಿ ಮೊಮ್ಮಗ ಅಜ್ಜಿ ಬಳಿ ಬಂದು ಹೊಸ ವರ್ಷದ ಪಾರ್ಟಿ ಮಾಡಲು ಹಣ ಬೇಕೆಂದು ಕೇಳಿದ್ದ, ಆದರೆ ಅಜ್ಜಿ ಹಣ ನೀಡಲು ನಿರಾಕರಿಸಿದ್ದರು. ನಂತರ ಈತ ನೆರೆಮನೆಯವರಿಂದ ಗೋಡೆಗೆ ಮೊಳೆ ಹೊಡೆಯಲು ಸುತ್ತಿಗೆ ಬೇಕು ಎಂದು ತಂದಿದ್ದು, ಅದರಿಂದಲೇ ಅಜ್ಜಿಯ ತಲೆ ಒಡೆದು, 18 ಸಾವಿರ ರೂಪಾಯಿ ಹಣ ತೆಗೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.