ನವ ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ನರ್ಸರಿ ಶಾಲೆಗಳ ಪ್ರವೇಶಾತಿ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 18ರಿಂದ ಸರ್ಕಾರಿ ನರ್ಸರಿ ಶಾಲೆಗಳ ನೋಂದಣಿ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ದೆಹಲಿಯ ಶಿಕ್ಷಣ ನಿರ್ದೇಶನಾಲಯ ಬುಧವಾರ(ಫೆ.10)ದಂದು ತಿಳಿಸಿದೆ.
ಓದಿ : ತೊಡಿಕಾನ: ಅಳಿವಿನಂಚಿನಲ್ಲಿರುವ ಮಹಷೀರ್ ಜಾತಿಯ ಮೀನುಗಳಿಗೆ ಬೇಕು ಶಾಶ್ವತ ಸಂರಕ್ಷಣೆ ಯೋಜನೆ
ಮಾರ್ಚ್ 20 2021 ರಂದು ಮೊದಲ ಪ್ರವೇಶ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ದೆಹಲಿ ಸರ್ಕಾರ ಹೇಳಿದೆ.
ಈಗಾಗಲೇ, ಶಿಕ್ಷಣ ನಿರ್ದೇಶನಾಲಯವು ಖಾಸಗಿ ನರ್ಸರಿ ಶಾಲೆಗಳಲ್ಲಿ ತಮ್ಮ ಪ್ರವೇಶಾತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಫೆಬ್ರವರಿ 15ರೊಳಗಾಗಿ ನೀಡಲು ತಿಳಿಸಿದೆ ಎಂದು ವರದಿಯಾಗಿದೆ.
ಕೆಲವು ದಿನಗಳ ಹಿಂದೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅತಿ ಶೀಘ್ರದಲ್ಲಿ ನರ್ಸರಿ ಶಾಲೆಗಳನ್ನು ತೆರೆಯುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಪ್ರವೇಶಾತಿಗೆ ಸಂಬಂಧಿಸಿದ ಪ್ರಮುಖಾಂಶಗಳು:
- ಆನ್ಲೈನ್ ರಿಜಿಸ್ಟ್ರೇಶನ್ ಫೆಬ್ರವರಿ 18ರಿಂದ ಆರಂಭ
- ಮಾರ್ಚ್ 4 2021 ಗುರುವಾರ ಆನ್ಲೈನ್ ರಿಜಿಸ್ಟ್ರೇಶನ್ ಮುಕ್ತಾಯ
- ಮೊದಲ ಪ್ರವೇಶ ಪಟ್ಟಿ : 20 ಮಾರ್ಚ್ 2021
- ಎರಡನೇ ಪ್ರವೇಶ ಪಟ್ಟಿ : 25 ಮಾರ್ಚ್ 2021
- ಪ್ರವೇಶ ಪ್ರಕ್ರಿಯೆಯ ಕೊನೆಯ ದಿನಾಂಕ : 31 ಮಾರ್ಚ್ 2021
- ಏಪ್ರಿಲ್ 1 2021 ಕ್ಕೆ ನರ್ಸರಿ ತರಗತಿಗಳ ಆರಂಭ ಮಾಡಲಾಗುವುದು ಎಂದು ನಿಗದಿಗೊಳಿಸಲಾಗಿದೆ.
ಓದಿ : ಭಾರತದಲ್ಲಿ ಬಿಡುಗಡೆಗೊಂಡಿವೆ ನೋಕಿಯಾ 5.4 & ನೋಕಿಯಾ 3.4