Advertisement
7,000 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‌ಆಪ್ ಕಂಪನಿಗಳು ಸಕ್ರಿಯವಾಗಿದ್ದು, ಅತೀ ಹೆಚ್ಚು ನವೋದ್ಯಮ ಸ್ಥಾಪನೆಗೆ ದೆಹಲಿ ವೇದಿಕೆ ಕಲ್ಪಿಸಿಕೊಡುತ್ತಿದೆ. ದೆಹಲಿ ಹಾಗೂ ಎನ್‌ಸಿಆರ್ ಸುತ್ತಲಿನ ಪ್ರದೇಶದಲ್ಲಿ ಒಟ್ಟು 4,491 ನವೋದ್ಯಮ ಕಾರ್ಯನಿರ್ವಹಿಸುತ್ತಿದೆ. ದೆಹಲಿಯ ಪ್ರಮುಖ ನಗರಗಳಾದ ಗುರುಗ್ರಾಮ್-1,544 ಹಾಗೂ ನೋಯ್ಡಾ – 1,004 ಸ್ಟಾರ್ಟ್‌ಆಪ್ ಕಂಪನಿಗಳು ಇವೆ ಎಂದು ಟೈ(ಟಿಐಇ) ದೆಹಲಿ-ಎನ್‌ಸಿಆರ್ ಮತ್ತು ಸಲಹಾ ಸಂಸ್ಥೆ ಜಿನ್ನೋವಾ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
Related Articles
Advertisement
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ 10 ಯುನಿ ಕಾರ್ನ್ ಗಳಿದ್ದು , ಇದರ ಮೌಲ್ಯ 1 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯಕ್ಕೆ ಸಮವಾಗಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಒಂಬತ್ತು, ಮುಂಬೈ ಮತ್ತು ಪುಣೆಯಲ್ಲಿ ತಲಾ ಎರಡು ಮತ್ತು ಚೆನ್ನೈ ನಲ್ಲಿ ಒಂದು ಯುನಿಕಾರ್ನ್ ಗಳು ಇವೆ. ಹಾಗೇ ಪ್ರತಿವರ್ಷ ಒಂದು ವಿನೂತನ ಯುನಿಕಾರ್ನ್ ಸಂಸ್ಥೆ ಪ್ರಾರಂಭವಾಗುತ್ತಿದೆ.
ಬೆಂಗಳೂರು ಐಟಿ ಪರಂಪರೆಗೆ ಹೆಸರಾಗಿದೆ, ಇದರ ಜತೆಗೆ ಬಿ 2 ಬಿ ಮತ್ತು ಬಿ 2 ಸಿ ಸ್ಟಾರ್ಟ್ ಆಪ್‌ಗಳಿಗೆ ಬೇಕಾದ ಮೂಲ ಸೌಕರ್ಯದ ಕೊರತೆ ಅಡ್ಡಿಯಾಗಿದೆ. ಮತ್ತೂಂದೆಡೆ ದೆಹಲಿ ಎನ್‌ಸಿಆರ್‌ಟಿ, ಬಿ 2 ಸಿ ಗೆ ಹೆಚ್ಚು ಅನುಕೂಲಕರ ವಾತಾವರಣ ಹೊಂದಿದೆ. ದೆಹಲಿ ಎನ್‌ಸಿಆರ್ ಪರವಾಗಿ ಕಾರ್ಯನಿರ್ವಹಿಸುವುದರ ಜತೆಗೆ ಹೂಡಿಕೆದಾರರು ಉದ್ಯಮ ಸ್ಥಾಪನೆಗೆ ಮೊದಲ ಆದ್ಯತೆ ನೀಡಲು ಅನುಕೂಲವಾಗಿದೆ. ಇದರಿಂದ ಸ್ಟಾರ್ಟ್ ಅಪ್ ಗಳಿಗೆ ಆರ್ಥಿಕ ನೆರವು ಸುಲಭವಾಗಿ ಸಿಗುತ್ತಿದೆ. ಭೌಗೋಳಿಕವಾಗಿಯೂ ಯುವ ಬಂಡವಾಳ ಹೂಡಿಕೆದಾರರಿಗೆ ಉದ್ಯಮ ಸ್ಥಾಪನೆಗೆ ಸುಲಭ ದಾರಿಯನ್ನು ಒದಗಿಸಿಕೊಟ್ಟಂತಾಗುತ್ತದೆ ಎಂದು ವೆಂಚರ್ ಇಂಟೆಲಿಜೆನ್ಸ್ ಸ್ಥಾಪಕ ಅರುಣ್ ನಟರಾಜನ್‌ತಿಳಿಸಿದ್ದಾರೆ.
ಹೂಡಿಕೆಯಲ್ಲಿ ದೆಹಲಿ ಎನ್‌ಸಿಆರ್ ಇತರ ನಗರಗಳನ್ನು ಹಿಂದಿಕ್ಕಲು ಕಾರಣವಾದ ಅಂಶಗಳ ಬಗ್ಗೆ ಟೈ ದೆಹಲಿ ಎನ್‌ಸಿಆರ್ ಕಾರ್ಯನಿರ್ವಾಹಕ ನಿರ್ದೇಶಕಿ ಗೀತಿಕಾ ದಯಾಳ್ ಅಭಿಪ್ರಾಯದಂತೆ, ಎನ್‌ಸಿಆರ್ 2.5 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ತಲಾ ಆದಾಯ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಾಣಿಜೋದ್ಯಮಿಗಳನ್ನು ಹೊಂದಿದೆ. ಈ ಪ್ರದೇಶದ ಜನರು ಹೆಚ್ಚಾಗಿ ವ್ಯಾಪಾರ-ವಹಿವಾಟು ವಿಷಯಗಳಿಗೆ ಒತ್ತು ನೀಡುತ್ತಿದ್ದು, ಅವರಲ್ಲಿ ಸವಾಲು ಸ್ವೀಕರಿಸುವ ಸಾಮರ್ಥ್ಯ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.