Advertisement

ದಿಲ್ಲಿಯಲ್ಲೂ ಕಾರ್‌ ಪೂಲಿಂಗ್‌ ನಿಷೇಧ?

08:34 AM Feb 08, 2017 | Team Udayavani |

ಹೊಸದಿಲ್ಲಿ: ಬೆಂಗಳೂರಿನಲ್ಲಿ ಕ್ಯಾಬ್‌ ಕಂಪೆನಿಗಳಾದ ಓಲಾ, ಉಬೆರ್‌ ಪ್ರಯಾಣಿಕರು ಕ್ಯಾಬ್‌ ಅನ್ನು ಶೇರಿಂಗ್‌ ಮಾಡುವುದಕ್ಕೆ ಸಾರಿಗೆ ಇಲಾಖೆ ನಿಷೇಧ ಹೇರಿದೆ. ಅದೇ ನಿಯಮವನ್ನು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿಯೂ ಅನುಸರಿಸುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಸಾರಿಗೆ ಇಲಾಖೆಯ ಸಮಿತಿ ಕೂಡ ಇದೇ ಕ್ರಮ ಅನುಸರಿಸುವಂತೆ ಶಿಫಾರಸು ಮಾಡಿತ್ತು. ದಿಲ್ಲಿ ಸರಕಾರದ ನಿಯಮಗಳ ಪ್ರಕಾರ ಎರಡೂ ಕಂಪೆನಿಗಳು ಕಂಟ್ರಾಕ್ಟ್ ಕ್ಯಾರೇಜ್‌ ಪರ್ಮಿಟ್‌ ನಿಯಮಗಳನ್ನು ಉಲ್ಲಂ ಸುತ್ತಿವೆ ಎಂದು ಮಾಧ್ಯಮವೊಂದರ ವರದಿಯಲ್ಲಿ ಹೇಳಲಾಗಿದೆ. ಆದರೆ ಕಂಪೆನಿಗಳು ಅದನ್ನು ನಡೆಸಿಕೊಂಡುಹೋಗುತ್ತಿವೆ ಎಂದು ಆರೋಪಿಸಲಾಗಿದೆ. ದಿಲ್ಲಿಯಲ್ಲಿ ಬೆಸ-ಸಮ ಸಾರಿಗೆ ವ್ಯವಸ್ಥೆ ಜಾರಿಯಲ್ಲಿದ್ದಾಗ ಕಾರು ಪೂಲಿಂಗ್‌ ಜಾರಿಗೊಳಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next