Advertisement

Delhi ಮುಂಗಾರಿನ ಅಬ್ಬರ: ಮೃತರ ಸಂಖ್ಯೆ 14ಕ್ಕೆ ಏರಿಕೆ

01:52 AM Jun 30, 2024 | Team Udayavani |

ಹೊಸದಿಲ್ಲಿ: ದಿಲ್ಲಿಯಲ್ಲಿ ಶನಿವಾರವೂ ಭಾರೀ ಮಳೆಯಾಗಿದ್ದು, ಮುಂದಿನ 2 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ವಸಂತ್‌ ವಿಹಾರ ಪ್ರದೇಶದಲ್ಲಿ ಗೋಡೆ ಕುಸಿತದಿಂದ ಶನಿವಾರ ಮೂವರು ಮೃತಪಟ್ಟಿದ್ದು, ಸಿರಾಸ್ಪುರ ಅಂಡರ್‌ಪಾಸ್‌ನಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿ ಪ್ರತ್ಯೇಕ ಘಟನೆಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾದವರ ಸಂಖ್ಯೆ 14ಕ್ಕೇರಿದೆ.

Advertisement

ದಿಲ್ಲಿಯಲ್ಲಿ ರವಿವಾರದಿಂದ 4 ದಿನ ಕಾಲ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.ಈಶಾನ್ಯ-ವಾಯವ್ಯ ಭಾರತದಲ್ಲಿ ಮಳೆ: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವೂ ಉಂಟಾಗಿದ್ದು, ಈಶಾನ್ಯ ಹಾಗೂ ವಾಯವ್ಯ ಭಾರತದಲ್ಲಿ ಮುಂದಿನ 4-5 ದಿನ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next