Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗೆ ಪ್ರತಿಕ್ರಿಸಿದ ಟ್ವೀಟರ್, ರಾಹುಲ್ ಗಾಂಧಿ ಅವರು ಪೋಸ್ಟ್ ನಮ್ಮ ಪಾಲಿಸಿಗೆ ವಿರುದ್ಧವಾಗಿತ್ತು ಎಂದು ಹೇಳಿದೆ.
Related Articles
Advertisement
ಮುಖ್ಯ ನ್ಯಾಯಮೂರ್ತಿ ಧೀರುಭಾಯ್ ನರನ್ ಭಾಯಿ ಪಟೇಲ್ ನೇತೃತ್ವದ ನ್ಯಾಯಪೀಠ, ಸಾಮಾಜಿಕ ಹೋರಾಟಗಾರ ಮಕರಂದ್ ಸುರೇಶ್ ಮಹದ್ಲೆಕರ್, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಬಾರದು ಎಂದು ಕಾನೂನು ಹೇಳುತ್ತದೆ. ಆದರೇ, ರಾಹುಲ್ ಗಾಂಧಿ ಬಹಿರಂಗ ಪಡಿಸಿದ್ದಾರೆ. ಇದು ಅಪರಾಧವೆಂದು ರಾಹುಲ್ ಗಾಂಧಿ ಅವರ ವಿರುದ್ಧ ಬಾಲಾಪರಾಧಿ ಜಸ್ಟೀಸ್ ಆಕ್ಟ್, 2015 ಮತ್ತು ಸೆಕ್ಷನ್ 23 (2), ಪ್ರಿವೆಂನ್ಶನ್ ಆಫ್ ಚಿಲ್ಡ್ರನ್ ಫ್ರಂ ಸೆಕ್ಸುವಲ್ ಅಫೆನ್ಸ್ ಆ್ಯಕ್ಟ್ (ಪೋಕ್ಸೋ) 2012 ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿ, ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನ್ನು ವಿಚಾರಣೆ ಮಾಡಿದೆ.
ವಿಚಾರಣೆ ವೇಳೆ ಟ್ವೀಟರ್ ಸಂಸ್ಥೆಯನ್ನು, ರಾಹುಲ್ ಗಾಂಧಿ ಅವರ ಖಾತೆ ಬ್ಲಾಕ್ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ಹೌದು, ರಾಹುಲ್ ಗಾಂಧಿ ಅವರ ಪೋಸ್ಟ್ ನಮ್ಮ ಪಾಲಿಸಿಗೆ ವಿರುದ್ಧವಾಗಿತ್ತು. ಹಾಗಾಗಿ ನಾವು ತೆಗೆದು ಹಾಕಿದ್ದೇವೆ ಎಂದು ಕೋರ್ಟ್ ಗೆ ತಿಳಿಸಿದೆ.
ಇದನ್ನೂ ಓದಿ : ರಾಜಕೀಯದಲ್ಲಿ ವಯಸ್ಸು ಮುಖ್ಯವಲ್ಲ, ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯ : ಸಿದ್ದು