ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಮುಖ್ಯಮಂತ್ರಿ ಸತ್ಯೇಂದ್ರ ಜೈನ್ ಜಾಮೀನು ಅರ್ಜಿಯನ್ನು ಕೋರ್ಟ್ ಶನಿವಾರ (ಜೂನ್ 18) ವಜಾಗೊಳಿಸಿದೆ.
ಇದನ್ನೂ ಓದಿ: ಉಪ್ಪಿನಂಗಡಿಯಲ್ಲಿ ಅಪಘಾತ; ಉದ್ವಿಗ್ನ ಸ್ಥಿತಿ: ಗಾಯಾಳು ಆಸ್ಪತ್ರೆಗೆ ಸಾಗಿಸಲು ನೆರವಾದ ಡಿಸಿ
2015-16ರಲ್ಲಿ ಕೋಲ್ಕತಾ ಮೂಲದ ಸಂಸ್ಥೆಯೊಂದರ ಮೂಲಕ ಹವಾಲಾ ವಹಿವಾಟು ನಡೆಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಕಳೆದ ತಿಂಗಳು ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತ್ತು.
ಸ್ಥಳೀಯ ಏಜೆಂಟರ ಮೂಲಕ ಎರಡೂ ಕಡೆಯಿಂದಲೂ ಹವಾಲಾ ವಹಿವಾಟು ನಡೆದಿತ್ತು. ಆದರೆ ಹಣ ವರ್ಗಾವಣೆಯಲ್ಲಿ ಬ್ಯಾಂಕ್ ಖಾತೆಯನ್ನು ಬಳಸಿರಲಿಲ್ಲವಾಗಿತ್ತು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಹವಾಲಾ ವಹಿವಾಟಿನಲ್ಲಿ 1.62 ಕೋಟಿ ರೂಪಾಯಿ ಹಣ ದುರುಪಯೋಗವಾಗಿರುವುದಾಗಿ ಆರೋಪಿಸಿ 2017ರಲ್ಲಿ ಸಿಬಿಐ ಸತ್ಯೇಂದ್ರ ಜೈನ್ ಮತ್ತು ಕುಟುಂಬ ಸದಸ್ಯರ ಮೇಲೆ ಪ್ರಕರಣ ದಾಖಲಿಸಿತ್ತು ಎಂದು ವರದಿ ವಿವರಿಸಿದೆ.
ಸತ್ಯೇಂದ್ರ ಜೈನ್ ಮತ್ತು ಇವರ ಕುಟುಂಬ ಸದಸ್ಯರು ನಾಲ್ಕು ನಕಲಿ ಕಂಪನಿಗಳನ್ನು ತೆರೆದಿದ್ದರು. ಆದರೆ ಈ ಕಂಪನಿಗಳಲ್ಲಿ ಯಾವುದೇ ವಹಿವಾಟು ನಡೆಯುತ್ತಿರಲಿಲ್ಲ. ಹಣ ದುರುಪಯೋಗ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆಯನ್ನು ಆರಂಭಿಸಿದ್ದು, ತನಿಖೆಯ ವರದಿ ಆಧಾರದ ಮೇಲೆ ಸಿಬಿಐ ಎಫ್ ಐಆರ್ ದಾಖಲಿಸಿತ್ತು.