Advertisement

ಮೆಟ್ರೋ ರೈಲು ಹರಿದರೂ ಪಾರಾದ ಮಹಿಳೆ

12:30 AM Mar 14, 2019 | Team Udayavani |

ಹೊಸದಿಲ್ಲಿ: ಹಾರಿದ 2 ಸಾವಿರ ರೂ. ನೋಟನ್ನು ಪಡೆಯಲು ಯತ್ನಿಸಿದ ಮಹಿಳೆ ದಿಲ್ಲಿ ಮೆಟ್ರೋ ರೈಲಿಗೆ ಸಿಕ್ಕಿ ಅಸುನೀಗುವುದರಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ದ್ವಾರಕಾ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಎರಡು ಕೋಚ್‌ಗಳು ಅವರ ಮೇಲಿಂದಾಗಿ ಹಾದು ಹೋದರೂ ಅಪಾಯ ಉಂಟಾಗಿರಲಿಲ್ಲ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಿಡುಗಡೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next