Advertisement

ಉದ್ಘಾಟನೆಗೆ ಮುನ್ನವೇ ಪ್ರಾಯೋಗಿಕ ಓಡಾಟದ ದಿಲ್ಲಿ ಮೆಟ್ರೋ ಅವಘಡ

07:00 PM Dec 19, 2017 | udayavani editorial |

ಹೊಸದಿಲ್ಲಿ : ಇಂದು ಮಂಗಳವಾರ ದಿಲ್ಲಿ ಮೆಟ್ರೋ ಅವಘಡ ಸಂಭವಿಸಿದೆ. ಪ್ರಾಯೋಗಿಕ ಓಡಾಟದಲ್ಲಿರುವ ಮೆಟ್ರೋ ಟ್ರೈನ್‌, ದಿಲ್ಲಿಯ ಕಾಲಿಂದಿ ಕುಂಜ್‌ ಡಿಪೋ ದಲ್ಲಿ ಅವಘಡಕ್ಕೆ ಗುರಿಯಾಯಿತು. ಮೆಟ್ರೋ ಟ್ರೈನ್‌ ತನ್ನ ಅವರಣವನ್ನು ದಾಟಿ ಹೊರ ನುಗ್ಗಿ ಬರುವ ಮೂಲಕ ಅವಘಡಕ್ಕೆ ಗುರಿಯಾಯಿತು.

Advertisement

ಟ್ರೈನ್‌ ಪ್ರಾಯೋಗಿಕ ಓಡಾಟದಲ್ಲಿದ್ದುದರಿಂದ ಒಳಗೆ ಯಾವುದೇ ಪ್ರಯಾಣಿಕರು ಇರಲಿಲ್ಲ; ಹಾಗಾಗಿ ಯಾರೂ ಗಾಯಗೊಂಡಿಲ್ಲ. ಡಿಎಂಆರ್‌ಸಿ ಆಡಳಿತ ನಿರ್ದೇಶಕರು ಈ ಅವಘಡದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇದಕ್ಕಾಗಿ ಮೂವರು ಹಿರಿಯ ಅಧಿಕಾರಿಗಳ ಸಮಿತಿಯನ್ನು ಅವರು ರೂಪಿಸಿದ್ದಾರೆ. 

ಕಲ್ಕಾಜಿ ಮಂದಿರ್‌ – ಬೊಟಾನಿಕಲ್‌ ಗಾರ್ಡನ್‌ ಲೈನಿನ ದಿಲ್ಲಿ ಮೆಟ್ರೋ, ದಕ್ಷಿಣ ದಿಲ್ಲಿ ಮತ್ತು ನೋಯ್ಡಾ ನಡುವಿನ ಪ್ರಯಾಣದ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಡಿ.25ರಂದು ಉದ್ಘಾಟಿಸಲಿದ್ದಾರೆ. 

12.64 ಕಿ.ಮಿ.ನ ಬೊಟಾನಿಕಲ್‌ ಗಾರ್ಡನ್‌ – ಜನಕಪುರಿ ವೆಸ್ಟ್‌  ಮೆಟ್ರೋ ಭಾಗಕ್ಕೆ ಮೆಟ್ರೋ ರೈಲು ಸುರಕ್ಷೆಯ ಕಮಿಷನರ್‌ ಕಳೆದ ತಿಂಗಳಲ್ಲಷ್ಟೇ ಸುರಕ್ಷಾ ಅನುಮೋದನೆಯನ್ನು ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next