Advertisement

ಪತ್ನಿ ಜತೆ ಜಗಳ…2 ವರ್ಷದ ಮಗುವನ್ನು ಮೂರನೇ ಮಹಡಿಯಿಂದ ಕೆಳಗೆ ಎಸೆದ ತಂದೆ!

01:33 PM Dec 17, 2022 | Team Udayavani |

ನವದೆಹಲಿ: ಪತ್ನಿ ಜತೆಗಿನ ಜಗಳ ವಿಕೋಪಕ್ಕೆ ತಿರುಗಿದ ಸಂದರ್ಭದಲ್ಲಿ ಮತಿಗೆಟ್ಟ ತಂದೆ ತನ್ನ ಎರಡು ವರ್ಷದ ಪುಟ್ಟ ಮಗುವನ್ನು ಮೂರನೇ ಅಂತಸ್ತಿನಿಂದ ಕೆಳಕ್ಕೆ ಎಸೆದ ಹೃದಯವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಎಚ್‍ ಪಿ ಯಿಂದ ಕೈಗೆಟುಕುವ ದರದ ಹೊಸ ಸ್ಮಾರ್ಟ್ ಪ್ರಿಂಟರ್ ಗಳ ಬಿಡುಗಡೆ

ಮಗುವನ್ನು ಕೆಳಗೆಸೆದ ನಂತರ ತಂದೆಯೂ ಕೂಡಾ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿದ್ದ. ಬಳಿಕ ಮಗು ಮತ್ತು ತಂದೆಯನ್ನು ಏಮ್ಸ್ ಗೆ ದಾಖಲಿಸಲಾಗಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಕಳೆದ ರಾತ್ರಿ ನವದೆಹಲಿಯ ಕಲ್ಕಾಜಿ ಎಂಬಲ್ಲಿ ಈ ಘಟನೆ ನಡೆದಿದೆ. ಇಬ್ಬರ ನಡುವಿನ ವೈಮನಸ್ಸಿನ ಪರಿಣಾಮ ಕಳೆದ ಕೆಲವು ತಿಂಗಳಿನಿಂದ ಗಂಡ-ಹೆಂಡತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಪೂಜಾ ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಪತಿ ಮನ್ ಸಿಂಗ್ ಬೇರೆಡೆ ವಾಸವಾಗಿದ್ದ.

ಶುಕ್ರವಾರ (ಡಿಸೆಂಬರ್ 16) ರಾತ್ರಿ ಮನ್ ಸಿಂಗ್ ಪತ್ನಿ ಪೂಜಾಳನ್ನು ಭೇಟಿಯಾಗಲು ಆಗಮಿಸಿದ್ದ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿತ್ತು. ಜಗಳ ತಾರಕಕ್ಕೇರಿದಾಗ ಮನ್ ಸಿಂಗ್ ಎರಡು ವರ್ಷದ ಮಗುವನ್ನು 3ನೇ ಮಹಡಿಯಿಂದ ಕೆಳಕ್ಕೆ (21 ಅಡಿ ಆಳ) ಎಸೆದು, ಬಳಿಕ ತಾನೂ ಕೆಳಕ್ಕೆ ಹಾರಿದ್ದ ಎಂದು ವರದಿ ವಿವರಿಸಿದೆ.

Advertisement

ಮನ್ ಸಿಂಗ್ ಮನೆಗೆ ಬರುವಾಗ ಮದ್ಯಪಾನ ಸೇವಿಸಿ ಬಂದಿರುವುದಾಗಿ ಪೂಜಾ ಅಜ್ಜಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮನ್ ಸಿಂಗ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next