Advertisement

Delhi: ಪೊಲೀಸ್‌ ಎಂದು ಬೆದರಿಸಿ ಅಪಾರ್ಟ್‌ಮೆಂಟ್‌ ಮೆಟ್ಟಿಲಲ್ಲೇ ಅತ್ಯಾಚಾರವೆಸಗಿದ ವ್ಯಕ್ತಿ

11:27 AM Jul 13, 2023 | Team Udayavani |

ದೆಹಲಿ: ಪೊಲೀಸ್‌ ಎಂದು ಯುವತಿಯನ್ನು ಬೆದರಿಸಿ ಆಕೆ ಮೇಲೆ ಅತ್ಯಾಚಾರವೆಸಗಿರುವ ವ್ಯಕ್ತಿಯನ್ನು ಗುರುವಾರ (ಜು.12 ರಂದು) ಬಂಧಿಸಲಾಗಿದೆ.

Advertisement

ಘಟನೆ ಹಿನ್ನೆಲೆ: ಜು.7 ರ ತಡರಾತ್ರಿ ಯುವತಿ ತನ್ನ ಪ್ರಿಯಕರನ ಜೊತೆ ಕಾರಿನಲ್ಲಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಕಾರಿನ ಕನ್ನಡಿಯಲ್ಲಿ ಕಾಣುತ್ತಿದ್ದ ಇಬ್ಬರ ಮುಖದ ಫೋಟೋ ಹಾಗೂ ವಿಡಿಯೋವನ್ನು ವ್ಯಕ್ತಿಯೊಬ್ಬ ರಹಸ್ಯವಾಗಿ ಮೊಬೈಲ್‌ ನಲ್ಲಿ ಚಿತ್ರೀಕರಿಸಿದ್ದಾನೆ. ಇದಾದ ಬಳಿಕ ಪ್ರಿಯಕರ ಯುವತಿಯನ್ನು ಆಕೆಯ ಅಪಾರ್ಟ್‌ ಮೆಂಟ್‌ ಗೆ ಬಿಟ್ಟು ಅಲ್ಲಿಂದ ತೆರಳಿದ್ದಾನೆ. ಆದರೆ ಈ ವೇಳೆ ಮೊಬೈಲ್‌ ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿದ್ದ ವ್ಯಕ್ತಿ, ಯುವತಿ ಅಪಾರ್ಟ್‌ ಮೆಂಟ್‌ ಹೊರಗೆ ಕಾದು ಕುಳಿತಿದ್ದಾನೆ. ಯುವತಿ ಅಪಾರ್ಟ್‌ ಮೆಂಟ್‌ ಒಳಗೆ ಹೋಗುವಾಗ ಆಕೆಯನ್ನು ಹಿಂಬಾಲಿಸಿ ಮೆಟ್ಟಿಲು ಬಳಿ ಆಕೆಯನ್ನು ಹಿಡಿದು ಮೊಬೈಲ್‌ ನಲ್ಲಿ ಚಿತ್ರೀಕರಿಸಿದ್ದ ಫೋಟೋ ಹಾಗೂ ವಿಡಿಯೋವನ್ನು ತೋರಿಸಿ ನಾನು ಪೊಲೀಸ್‌ ಇದನ್ನು ವೈರಲ್‌ ಮಾಡುತ್ತೇನೆ ಎಂದು ಆಕೆಯನ್ನು ಬೆದರಿಸಿ ಮೇಲೆ ಅತ್ಯಾಚಾರವೆಸಗಿ ಅಲ್ಲಿಂದ ಪರಾರಿ ಆಗಿದ್ದಾನೆ.

ಯುವತಿ ಪ್ರಿಯಕರನಿಗೆ ಕರೆ ಮಾಡಿ, ಮನೆಯವರೊಂದಿಗೆ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಆರೋಪಿಯ ಸ್ಕೆಚ್‌ ಬಿಡಿಸಿ ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ. ಸಿಸಿಟವಿಯನ್ನು ಪರಿಶೀಲಿಸಿ, ಸತತ ಹುಡಕಾಟದ ಬಳಿಕ ರವಿ ಸೋಲಂಕಿ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next