Advertisement
ಸೋನಿಯಾ ವಿಹಾರ್ ನಿವಾಸಿಯಾಗಿರುವ ಆರೋಪಿ ಸೂರಜ್ ಕುಮಾರ್, ಪಾಲಂ ಮೆಟ್ರೋ ನಿಲ್ದಾಣದಲ್ಲಿ ಮನೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಆಡಿಟೋರಿಯಂ ಸಮೀಪ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Related Articles
Advertisement
ಏತನ್ಮಧ್ಯೆ ತಂದೆ ಸಿಂಗ್ ಸೂರಜ್ ಜತೆಗಿನ ಸಂಬಂಧವನ್ನು ಬಲವಾಗಿ ವಿರೋಧಿಸಿದ್ದರು. ಸೂರಜ್ ಪೋಷಕರು ವಿವಾಹ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ ಬಿಜೇಂದ್ರ ಸಿಂಗ್ ವಿವಾಹ ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಮಗಳನ್ನು ವಿವಾಹ ಮಾಡಿಕೊಡುವುದಿಲ್ಲ ಎಂದು ಹೇಳಿದ್ದ ಸಿಂಗ್ ಅನ್ನು ಕೊಲೆ ಮಾಡುವ ಸಂಚು ರೂಪಿಸಿರುವುದಾಗಿ ವಿಚಾರಣೆ ವೇಳೆ ಸೂರಜ್ ತಿಳಿಸಿದ್ದ. ಕೆಲವು ದಿನಗಳ ಕಾಲ ಸಿಂಗ್ ಹಾಗೂ ಅವರ ಪತ್ನಿಯ ಚಲನವಲನ ಗಮನಿಸಿರುವುದಾಗಿ ವಿವರಿಸಿದ್ದಾನೆ.
ನವೆಂಬರ್ 28ರಂದು ಆರೋಪಿ ಚೂರಿಯಿಂದ ಸಿಂಗ್ ಗೆ ಇರಿದಿದ್ದ, ನಂತರ ಪ್ರೆಶರ್ ಕುಕ್ಕರ್ ನಿಂದ ಹಲವಾರು ಬಾರಿ ತಲೆಗೆ ಹೊಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.