ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮುಂದುವರಿಕೆ ನಡುವೆಯೇ ಮೊಬೈಲ್ ಆ್ಯಪ್ ಹಾಗೂ ಆನ್ ಲೈನ್ ವೆಬ್ ಪೋರ್ಟಲ್ ಮೂಲಕ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ದೆಹಲಿ ಸರ್ಕಾರ ಮಂಗಳವಾರ( ಜೂನ್ 01) ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದಲ್ಲಿ Covid ಪ್ರಕರಣಗಳ ಸಂಖ್ಯೆ ಭಾರೀ ಇಳಿಕೆ; 24ಗಂಟೆಗಳಲ್ಲಿ 1.27 ಲಕ್ಷ ಪ್ರಕರಣ ಪತ್ತೆ
ದೆಹಲಿ ಅಬಕಾರಿ (ತಿದ್ದುಪಡಿ) ನಿಯಮ 2021ರ ಪ್ರಕಾರ ದೆಹಲಿ ಸರ್ಕಾರ ಸೋಮವಾರ (ಮೇ 31) ಹೊರಡಿಸಿರುವ ಅಧಿಸೂಚನೆಯಂತೆ, ಎಲ್-13 ಪರವಾನಿಗೆ ಹೊಂದಿರುವವರು ದೆಹಲಿಗರ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಬಹುದು ಎಂದು ತಿಳಿಸಿದೆ.
ಅಗತ್ಯ ಪರವಾನಿಗೆ ಹೊಂದಿರುವವರಿಗೆ ಖಾಲಿ ಪ್ರದೇಶವಾದ ಟೆರೇಸ್, ಕ್ಲಬ್ ಆವರಣ, ಬಾರ್ ಗಳು ಮತ್ತು ರೆಸ್ಟೋರೆಂಟ್ ಗಳಂತಹ ತೆರೆದ ಸ್ಥಳಗಳಲ್ಲಿ ಮದ್ಯ ಸರಬರಾಜು ಮಾಡಲು ಅವಕಾಶ ನೀಡಲಾಗಿದೆ. ಆದರೆ ಯಾವುದೇ ಹಾಸ್ಟೆಲ್, ಕಚೇರಿ ಅಥವಾ ಸಂಸ್ಥೆಗಳಿಗೆ ಮದ್ಯ ಸರಬರಾಜು ಮಾಡುವಂತಿಲ್ಲ ಎಂದು ತಿಳಿಸಿದೆ.
ರಾಜಧಾನಿ ದೆಹಲಿಯಲ್ಲಿ ಜೂನ್ 7ರವರೆಗೆ ಲಾಕ್ ಡೌನ್ ವಿಸ್ತರಣೆಯಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಕೇವಲ ಕಾರ್ಖಾನೆಗಳು ಮತ್ತು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಲಾಗಿದೆ.