ನವದೆಹಲಿ: ಆಡಳಿತಾರೂಢ ಆಮ್ ಆದ್ಮಿ ಪಕ್ಷ ರಾಜಕೀಯ ಜಾಹೀರಾತಿಗಾಗಿ ಬಳಕೆ ಮಾಡಿರುವ 97 ಕೋಟಿ ರೂಪಾಯಿ ಹಣ ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ವರ್ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿ ಮುಖ್ಯ ಕಾರ್ಯದರ್ಶಿಗೆ ಮಂಗಳವಾರ (ಡಿಸೆಂಬರ್ 20) ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ:ಅಮರಾವತಿ ಉಮೇಶ್ ಹತ್ಯೆ ಮಾಡಿದ್ದು ತೀವ್ರಗಾಮಿ ಇಸ್ಲಾಮಿಸ್ಟ್ ಗಳು: ಎನ್ಐಎ ವರದಿ
ರಾಜಕೀಯ ಪಕ್ಷಗಳ ಜಾಹೀರಾತಿಗೆ ಸಂಬಂಧಿಸಿದಂತೆ 2016ರ ದೆಹಲಿ ಹೈಕೋರ್ಟ್ ಆದೇಶ ಮತ್ತು ಸರ್ಕಾರಿ ಜಾಹೀರಾತು ವಿಷಯ ನಿಯಂತ್ರಣ ಸಮಿತಿ (ಸಿಸಿಆರ್ ಜಿಎ) ಆದೇಶದ ಉಲ್ಲಂಘನೆಯಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಸರ್ಕಾರದ ಹಣವನ್ನು ರಾಜಕೀಯದ ಜಾಹೀರಾತಿಗೆ ಬಳಸಿರುವುದು ಸಿಸಿಆರ್ ಜಿಎ ನಿಯಮಗಳ ಉಲ್ಲಂಘನೆಯಾಗಿದೆ. ಆ ನಿಟ್ಟಿನಲ್ಲಿ ಜಾಹೀರಾತಿಗೆ ಬಳಸಿರುವ 97 ಕೋಟಿ ರೂಪಾಯಿ ಹಣವನ್ನು ಆಡಳಿತಾರೂಢ ಆಮ್ ಆದ್ಮಿ ಪಕ್ಷದಿಂದ ವಸೂಲಿ ಮಾಡಬೇಕಾಗಿದೆ ಎಂದು ಗವರ್ನರ್ ಸೂಚಿಸಿದ್ದಾರೆ.
ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) 97.14 ಕೋಟಿ ರೂಪಾಯಿ ಹಣವನ್ನು ಜಾಹೀರಾತಿಗೆ ಖರ್ಚು ಮಾಡಿದೆ ಅಥವಾ ಸ್ಪಷ್ಟತೆ ಇಲ್ಲದ ಜಾಹೀರಾತುಗಳ ಖಾತೆಯಲ್ಲಿ ಉಲ್ಲೇಖಿಸಿದೆ ಎಂದು ಗವರ್ನರ್ ತಿಳಿಸಿದ್ದಾರೆ.