Advertisement

ಗಾಜೀಪುರದಲ್ಲಿ ಘನ ತ್ಯಾಜ್ಯ ಸುರಿಯದಂತೆ ದಿಲ್ಲಿ ಎಲ್‌ಜಿ ಆದೇಶ

03:09 PM Sep 02, 2017 | Team Udayavani |

ಹೊಸದಿಲ್ಲಿ : ದಿಲ್ಲಿ ರಾಜ್ಯಪಾಲರಾಗಿರುವ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬಜಾಲ್‌ ಅವರು ಗಾಜೀಪುರದಲ್ಲಿ ಇನ್ನು ಯಾವುದೇ ಘನ ತ್ಯಾಜ್ಯಗಳನ್ನು ಯಾರೂ ಸುರಿಯಕೂಡದು ಎಂದು ತತ್‌ಕ್ಷಣದಿಂದ ಜಾರಿಗೆ ಬರುವ ಆದೇಶವನ್ನು ಹೊರಡಿಸಿದ್ದಾರೆ. 

Advertisement

ಇದೇ ವೇಳೆ ಗಾಜೀಪುರದಲ್ಲಿ ಈಗ ಪರ್ವತದೆತ್ತರಕ್ಕೆ ರಾಶಿ ಬದ್ದಿರುವ ಘನ ತ್ಯಾಜ್ಯವನ್ನು ಇನ್ನೆರಡು ವರ್ಷದೊಳಗೆ ಖಾಲಿ ಮಾಡುವಂತೆಯೂ ಅವರು  ಆದೇಶಿಸಿದ್ದಾರೆ. 

ಸುಮಾರು 15 ಅಂತಸ್ತುಗಳ ಎತ್ತರಕ್ಕೆ ಎದ್ದಿದ್ದ ತ್ಯಾಜ್ಯ ಪರ್ವತ ಕುಸಿದು ಇಬ್ಬರ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಈ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿರುವುದು ಗಮನಾರ್ಹವಾಗಿದೆ. 

ಘನ ತ್ಯಾಜ್ಯ ಸುರಿಯುವ ಪ್ರದೇಶಕ್ಕೆ ಸಮೀಪದ ರಸ್ತೆಗೆ ವಾಹನ ಸಂಚಾರ ಮಾರ್ಗವನ್ನು ಬದಲಾಯಿಸಲು ಕೂಡ ರಾಜ್ಯಪಾಲರು ಆದೇಶಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next