Advertisement

Delhi ನೀರಿಗಾಗಿ ಕೋಲಾಹಲ: ಮಡಕೆಗಳಿಂದಲೇ ಜಲಮಂಡಳಿ ಕಚೇರಿ ಧ್ವಂಸ

09:53 PM Jun 16, 2024 | Team Udayavani |

ಹೊಸದಿಲ್ಲಿ : ತೀವ್ರ ಶಾಖದ ನಡುವೆ, ರಾಷ್ಟ್ರ ರಾಜಧಾನಿಯು ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ, ಇದು ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಭಾನುವಾರ ಉದ್ರಿಕ್ತ ಜನರ ಗುಂಪೊಂದು ಛತ್ತರ್‌ಪುರದಲ್ಲಿರುವ ದೆಹಲಿ ಜಲ ಮಂಡಳಿ (ಡಿಜೆಬಿ) ಕಚೇರಿಯನ್ನು ಧ್ವಂಸಗೊಳಿಸಿದ್ದು, ಮಣ್ಣಿನ ಮಡಿಕೆಗಳಿಂದ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದೆ.

ಘಟನೆಯು ಬಿಜೆಪಿ ಮತ್ತು ಎಎಪಿ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ದೆಹಲಿ ಸಚಿವ ಸೌರಭ್ ಭಾರದ್ವಾಜ್, ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಬಿಜೆಪಿ ನಾಯಕರು ವಿನಾಶಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕ ರಮೇಶ್ ಬಿಧುರಿ ಅವರು ”ದೆಹಲಿ ಸರ್ಕಾರ ಭ್ರಷ್ಟವಾಗಿದೆ ಮತ್ತು ಭ್ರಷ್ಟಾಚಾರ ಆರೋಪಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಭ್ರಷ್ಟಾಚಾರ ಆರೋಪಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಿರೂಪಣೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ದೆಹಲಿ ಜಲ ಮಂಡಳಿಯಲ್ಲಿ ಯಾವುದೇ ಲೆಕ್ಕಪರಿಶೋಧನೆ ನಡೆದಿಲ್ಲ. 70,000 ಕೋಟಿ ನಷ್ಟದಲ್ಲಿದೆ. ಇದೊಂದು ಭ್ರಷ್ಟ ಸರಕಾರ. ಈ ಸರ್ಕಾರದಿಂದ ಮುಕ್ತವಾಗಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಮುಂದಿಟ್ಟಿದ್ದೇವೆ” ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next