Advertisement

NEET ದಿಲ್ಲಿಗೂ  ಪರೀಕ್ಷೆ ಅಕ್ರಮ ನಂಟು!

12:56 AM Jun 25, 2024 | Team Udayavani |

ಹೊಸದಿಲ್ಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಮಹಾರಾಷ್ಟ್ರದ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ, ಅದರ ನಂಟು ದಿಲ್ಲಿಗೂ ವಿಸ್ತರಣೆಯಾಗಿದೆ. ಶಿಕ್ಷಕರಾದ ಸಂಜಯ್‌ ತುಕಾ ರಾಮ್‌ ಜಾಧವ್‌ ಮತ್ತು ಜಲೀಲ್‌ ಉಮರ್‌ಖಾನ್‌ ಪಠಾಣ್‌ ಅವರನ್ನು ವಿಚಾರಣೆ ನಡೆಸಿದ್ದ ಎಟಿಎಸ್‌, ಪಠಾಣ್‌ನನ್ನು ಬಂಧಿಸಿತ್ತು. ವಿಚಾರಣೆ ಬಳಿಕ ಜಾಧವ್‌ ಪರಾರಿಯಾಗಿದ್ದಾನೆ.

Advertisement

ಹೊಸದಿಲ್ಲಿ ಮೂಲದ ಗಂಗಾಧರ ಎಂಬಾತ ಸೋರಿಕೆಯಾಗಿರುವ ಪ್ರಶ್ನೆ ಪತ್ರಿಕೆಯನ್ನು ಹೆಚ್ಚು ಮೊತ್ತ ನೀಡುವ ಅಭ್ಯರ್ಥಿಗಳ ಸಂಪರ್ಕವನ್ನು ಈ ಇಬ್ಬರು ಶಿಕ್ಷಕರಿಗೆ ಮಾಡಿಸಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ. ಹಲವು ವಿದ್ಯಾರ್ಥಿಗಳ ಅಡ್ಮಿಟ್‌ ಕಾರ್ಡ್‌, ವಾಟ್ಸಾಪ್‌ ಚಾಟ್ಸ್‌ ಮತ್ತು ಫೋನ್‌ ನಂಬರ್‌ಗಳು ದೊರೆತಿವೆ ಎಂದು ಪೊಲೀಸರು ಹೇಳಿದ್ದಾರೆ.

ಪರೀಕ್ಷೆ ಮೊದಲೇ ಉತ್ತರ ಸಹಿತ ಪ್ರಶ್ನೆ ಪತ್ರಿಕೆ!: “ಸಾಲ್ವರ್‌ ಗ್ಯಾಂಗ್‌’ನ ಸದಸ್ಯರೊಬ್ಬರಿಗೆ ನೀಟ್‌ ಯುಜಿ ಪರೀಕ್ಷೆ ನಡೆಯುವ ಮುಂಚಿನ ದಿನವೇ ಉತ್ತರ ಸಹಿತ ಪ್ರಶ್ನೆಪತ್ರಿಕೆ ಪಿಡಿಎಫ್ ದೊರೆತಿತ್ತು ಎಂದು ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ ಹೇಳಿದೆ. ಈ ಆರೋಪಿಯನ್ನು ಛತ್ತೀಸ್‌ಗಢನಲ್ಲಿ ಬಂಧಿಸಿದ್ದೇವೆ ಎಂದು ಅದು ತಿಳಿಸಿದೆ.

ಸುಟ್ಟ ಸ್ಥಿತಿಯಲ್ಲಿ ಇದ್ದ 68 ಪ್ರಶ್ನೆಪತ್ರಿಕೆಗಳು!: ಝಾರ್ಖಂಡ್‌ನ‌ ಹಜಾರಿಭಾಗ್‌ ನೀಟ್‌ ಪರೀûಾ ಕೇಂದ್ರದಲ್ಲಿ ಸುಟ್ಟ ಪ್ರಶ್ನೆ ಪತ್ರಿಕೆಗಳ ನಕಲು ಪ್ರತಿಗಳು ದೊರೆತಿದ್ದು, ಇದರಲ್ಲಿರುವ 68 ಪ್ರಶ್ನೆಗಳು ನೀಟ್‌ ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳಿಗೆ ಹೊಂದಾಣಿಕೆಯಾಗುತ್ತವೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ, ನೀಟ್‌ ಯುಜಿ ಪರೀಕ್ಷೆ ರದ್ದು ಮತ್ತು ಮರು ಪರೀಕ್ಷೆ ನಡೆಸಿದ್ದನ್ನ ಪ್ರಶ್ನಿಸಿ ಸಲ್ಲಿಕೆಯಾಗಿರು ಅರ್ಜಿ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್‌, ಕೇಂದ್ರ ಮತ್ತು ಎನ್‌ಟಿಎಗೆ ನೋಟಿಸ್‌ ನೀಡಿದೆ.

ನೀಟ್‌ ರದ್ದಾಗಲಿ, ರಾಜ್ಯಗಳೇ ಪರೀಕ್ಷೆ ನಡೆಸಲಿ: ಮಮತಾ
ರಾಷ್ಟ್ರೀಯ ಮಟ್ಟದ ನೀಟ್‌ ಪರೀಕ್ಷೆ ರದ್ದು ಗೊಳಿಸಿ ರಾಜ್ಯಗಳೇ ಪರೀಕ್ಷೆ ನಡೆಸುವಂತಹ ವ್ಯವಸ್ಥೆ ಜಾರಿಗೊಳಿಸಿ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿಗೆ ಆಗ್ರಹಿಸಿದ್ದಾರೆ. ಈ ಕುರಿತ ಬರೆದ ಪತ್ರದಲ್ಲಿ ಇದನ್ನು ಪ್ರಸ್ತಾವಿಸಿರುವ ಮಮತಾ, ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು. ಈ ಹಿಂದೆ ರಾಜ್ಯಗಳೇ ಪ್ರವೇಶ ಪರೀಕ್ಷೆ ಯನ್ನು ನಡೆಸುತ್ತಿದ್ದ ವ್ಯವಸ್ಥೆಯನ್ನು ಮರಳಿ ತರಬೇಕು ಹಾಗೂ ಈಗ ಇರುವ ನೀಟ್‌ ಅನ್ನು ರದ್ದುಪಡಿಸಬೇಕು ಎಂದು ಹೇಳಿದ್ದಾರೆ.

Advertisement

ಶೀಘ್ರವೇ ನೀಟ್‌-ಪಿಜಿ ಪರೀಕ್ಷೆ ದಿನಾಂಕ ಘೋಷಣೆ?
ಮುಂದೂಡಿಕೆ ಆಗಿರುವ ನೀಟ್‌- ಪಿಜಿ ಪರೀಕ್ಷೆ ವ್ಯವಸ್ಥೆ ಪರಿಶೀಲನೆಯನ್ನು ಕೇಂದ್ರ ಸರಕಾರ ಸೋಮವಾರ ನಡೆಸಿದೆ. ಆರೋಗ್ಯ ಸಚಿವಾಲಯ ಮತ್ತು ವೈದ್ಯಕೀಯ ಪರೀಕ್ಷೆ ವಿಭಾಗದ ಅಧಿಕಾರಿಗಳು ಅದರಲ್ಲಿ ಭಾಗವಹಿ ಸಿದ್ದರು. ತಾಂತ್ರಿಕ ಸಲಹೆ ನೀಡುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌)ನ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. ಸಭೆಯಲ್ಲಿ ಹೊಸ ದಿನಾಂಕ ನಿರ್ಧಾರ ಸೇರಿ ದಂತೆ ಪ್ರಮುಖ ಅಂಶಗಳ ಬಗ್ಗೆ, ಲೋಪ ವಾಗ ದಂತೆ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದೆ ಎನ್ನಲಾಗಿದೆ.

3 ರಾಜ್ಯಗಳ 5 ಪ್ರಕರಣಗಳನ್ನು ಕೈಗೆತ್ತಿಕೊಂಡ ಸಿಬಿಐ
ಬಿಹಾರ, ಗುಜರಾತ್‌, ರಾಜಸ್ಥಾನಗಳಲ್ಲಿ ನೀಟ್‌-ಯುಜಿ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮಗಳ ತನಿಖೆಯ ಹೊಣೆಯನ್ನು ಸಿಬಿಐ ಸೋಮವಾರ ವಹಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್‌ ದಾಖಲಿಸಿಕೊಂಡಿದೆ. ಬಿಹಾರ ಮತ್ತು ಗುಜರಾತ್‌ಗಳಲ್ಲಿ ತಲಾ 1, ಬಿಹಾರದಲ್ಲಿ 3 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next