Advertisement

ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ 2ನೇ ಸ್ಥಾನ

09:55 PM May 03, 2022 | Team Udayavani |

ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಪ್ರಯಾಣಿಕರ ಹರಿವು ಇರುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2ನೇ ಸ್ಥಾನ ಪಡೆದಿದೆ.

Advertisement

ಇದೇ ಮಾರ್ಚ್‌ನಲ್ಲಿ, ಈ ವಿಮಾನ ನಿಲ್ದಾಣದ ಮೂಲಕ 36.10 ಲಕ್ಷ ಪ್ರಯಾಣಿಕರು ವಿಮಾನ ಸೇವೆಗಳನ್ನು ಪಡೆದಿದ್ದ ಕಾರಣಕ್ಕಾಗಿ, ಈ ವಿಮಾನ ನಿಲ್ದಾಣಕ್ಕೆ ಈ ಹೆಗ್ಗಳಿಕೆ ಬಂದಿದೆ.

ಮಾರ್ಚ್‌ನಲ್ಲಿ 44.20 ಲಕ್ಷ ಜನರಿಗೆ ವೈಮಾನಿಕ ಸೇವೆಗಳನ್ನು ಒದಗಿಸಿದ ಅಮೆರಿಕದ ಅಟ್ಲಾಂಟಾ ವಿಮಾನ ನಿಲ್ದಾಣ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 35.50 ಲಕ್ಷ ಪ್ರಯಾಣಿಕರಿಗೆ ವೈಮಾನಿಕ ಸೇವೆಗಳನ್ನು ನೀಡಿರುವ ಯುಎಇ ವಿಮಾನ ನಿಲ್ದಾಣಕ್ಕೆ ಮೂರನೇ ಸ್ಥಾನ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next