ಹೊಸದಿಲ್ಲಿ: ವೈವಾಹಿಕ ಜೀವನದಲ್ಲಿ ಪತ್ನಿಯ ಒಪ್ಪಿಗೆ ಪಡೆಯದೇ ಪತಿಯು ಲೈಂಗಿಕ ಸಂಪರ್ಕ ಸಾಧಿಸುವುದನ್ನು ಅಪರಾಧವೆಂದು ಪರಿಗಣಿಸಬೇಕೇ ಬೇಡವೇ ಎಂಬ ಬಗ್ಗೆ ತನ್ನ ನಿಲುವು ಹೇಳಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೋರಿದ್ದ ಕೇಂದ್ರ ಸರಕಾರದ ಮನವಿಯನ್ನು ದಿಲ್ಲಿ ಹೈಕೋರ್ಟ್ ತಳ್ಳಿಹಾಕಿದೆ.
“ಬಲವಂತದ ಲೈಂಗಿಕತೆಯನ್ನು ಕಾನೂನುಬಾಹಿರಗೊಳಿಸುವ ಬಗ್ಗೆ ಎಲ್ಲ ರಾಜ್ಯಗಳು ತಮ್ಮ ನಿಲುವುಗಳನ್ನು ತಿಳಿಸಬೇಕೆಂದು ಈಗಾಗಲೇ ಸೂಚಿಸಲಾಗಿದೆ. ಹಾಗಾಗಿ ಮತ್ತಷ್ಟು ಕಾಲಾವ ಕಾಶ ಬೇಕು’ ಎಂದು ಕೇಂದ್ರ ಸರಕಾರ, ನ್ಯಾಯಪೀಠವನ್ನು ಕೋರಿತು.
ಆದರೆ ಮನವಿಯನ್ನು ತಳ್ಳಿಹಾಕಿದ ನ್ಯಾ| ರಾಜೀವ್ ಮತ್ತು ನ್ಯಾ| ಸಿ. ಹರಿಶಂಕರ್ ಅವರನ್ನೊಳಗೊಂಡ ನ್ಯಾಯಪೀಠ, “ಒಪ್ಪಿಗೆಯಿಲ್ಲದ ಅಥವಾ ಬಲವಂತದ ಲೈಂಗಿಕತೆ’ ಎಂಬುದು ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಯಾಗಿರುವುದರಿಂದ ಸದ್ಯಕ್ಕೆ ನಡೆಯುತ್ತಿರುವ ವಿಚಾರಣೆಯನ್ನು ಮುಂದೂಡಲು ಸಾಧ್ಯವಿಲ್ಲ.
ಇದನ್ನೂ ಓದಿ:ಕುರಿ-ಮೇಕೆ ಮೃತಪಟ್ಟರೆ ಹತ್ತು ಸಾವಿರ ಪರಿಹಾರ ಕೊಡಲು ಆಗ್ರಹ
ನೀವು (ಕೇಂದ್ರ) ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮುಂದುವರಿಸಿ. ನಾವು ವಿಚಾರಣೆ ಮುಂದುವರಿಸುತ್ತೇವೆ. ತೀರ್ಪನ್ನು ಕಾಯ್ದಿರಿಸುತ್ತೇವೆ ಎಂದು ನ್ಯಾಯಪೀಠ ಹೇಳಿತು.