Advertisement

ದೆಹಲಿ ಮೆಟ್ರೊ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಬರಲಿದೆ ಮದ್ಯದಂಗಡಿ

06:45 PM Sep 04, 2022 | Team Udayavani |

ನವದೆಹಲಿ: ಆರ್ಥಿಕತೆ ಉತ್ತೇಜಿಸಲು ಮತ್ತು ಸುಲಭವಾಗಿ ಜನರಿಗೆ ಮದ್ಯ ದೊರೆಯುವಂತಾಗಲು ದೆಹಲಿ ಸರ್ಕಾರ ಎಲ್ಲಾ ಮೆಟ್ರೊ ನಿಲ್ದಾಣಗಳಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದೆ.

Advertisement

ಈಗಾಗಲೇ ದೆಹಲಿಯ ಎಂಟು ಮೆಟ್ರೊ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಉಳಿದ ಮೆಟ್ರೊ ನಿಲ್ದಾಣಗಳಲ್ಲಿ ಜಾಗವನ್ನು ಗುರುತಿಸಲಾಗುತ್ತಿದ್ದು, ಶೀಘ್ರದಲ್ಲೇ ರಿಟೇಲ್‌ ಮದ್ಯದಂಗಡಿಗಳು ತಲೆಯತ್ತಲಿವೆ.

“ಮೆಟ್ರೊ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕೇವಲ ವೈನ್‌ ಮತ್ತು ಬಿಯರ್‌ ಮಾರುವ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಯೋಜಿಸಿದ್ದೇವೆ. ಈ ಅಂಗಡಿಗಳಲ್ಲಿ ವಿಸ್ಕಿ ಮತ್ತು ರಮ್‌ ಮಾರುವಂತಿಲ್ಲ,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next