Advertisement

‘SEX’ಸಮಸ್ಯೆ :ದೆಹಲಿ ಸಾರಿಗೆ ಇಲಾಖೆಗೆ ನೋಟಿಸ್ ಕಳುಹಿಸಿದ ಮಹಿಳಾ ಆಯೋಗ

05:59 PM Dec 04, 2021 | Team Udayavani |

ನವದೆಹಲಿ : ದೆಹಲಿ ಮಹಿಳಾ ಆಯೋಗವು ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ‘SEX’ ಅಕ್ಷರಗಳನ್ನು ಒಳಗೊಂಡಿರುವ ಯುವತಿಯ  ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯಿಂದಾಗಿ ಆಕೆ “ತೀವ್ರ  ಮುಜುಗರ ” ಎದುರಿಸುತ್ತಿದ್ದು,ಅದನ್ನು ಬದಲಾಯಿಸಬೇಕೆಂದು ಕೋರಿದೆ.

Advertisement

ಹೊಸ ಸರಣಿಯಡಿ ನೋಂದಣಿಯಾಗಿರುವ ಒಟ್ಟು ವಾಹನಗಳ ಸಂಖ್ಯೆಯನ್ನು ತನ್ನ ಉತ್ತರದಲ್ಲಿ ನಮೂದಿಸುವಂತೆ ಮಹಿಳಾ ಆಯೋಗ ಇಲಾಖೆಯನ್ನು ಕೇಳಿದೆ.

ಈ ವಿಚಾರ ಬೆಳಕಿಗೆ ಬಂದ ನಂತರ ಇಡೀ ‘SEX’ ಸರಣಿ ನಂಬರ್ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

“ಜನರು ತುಂಬಾ ಕ್ಷುಲ್ಲಕ ವಿಚಾರದಲ್ಲಿ ನಿಂದನೆಗಿಳಿದಿರುವುದು ತುಂಬಾ ದುರದೃಷ್ಟಕರ ಸಂಗತಿ. ಯುವತಿ ತುಂಬಾ ಕಿರುಕುಳವನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ನಾನು ಸಾರಿಗೆ ಇಲಾಖೆಗೆ ನಾಲ್ಕು ದಿನಗಳ ಕಾಲಾವಕಾಶವನ್ನು ನೀಡಿದ್ದೇನೆ. ಆದ್ದರಿಂದ ಯುವತಿಯ ಇನ್ನು ಮುಂದೆ ತೊಂದರೆಗೊಳಗಾಗಬಾರದು ಎಂದು ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿಕೆ ನೀಡಿದ್ದಾರೆ.

ಎಸ್ ಇ ಎಕ್ಸ್ ಪದವನ್ನು ಹೊಂದಿರುವ ಸರಣಿಯಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ನಾನು ಸಾರಿಗೆ ಇಲಾಖೆಯನ್ನು ಕೇಳಿದ್ದೇನೆ” ಎಂದು ಅವರು ಹೇಳಿದರು.

Advertisement

ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ‘ಎಸ್’ ಅಕ್ಷರದಿಂದ ಸೂಚಿಸಲಾಗುತ್ತದೆ. ಪ್ರಸ್ತುತ, ದ್ವಿಚಕ್ರ ವಾಹನಗಳ ನೋಂದಣಿಗಾಗಿ ಚಲಾವಣೆಯಲ್ಲಿರುವ ಎರಡು ಅಕ್ಷರಗಳು ‘ಇ’ ಮತ್ತು ‘ಎಕ್ಸ್’. ಹಾಗಾಗಿ, ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‌ಗಳು ‘ಎಸ್’ ಅಕ್ಷರದ ನಂತರ ‘ಇಎಕ್ಸ್’ ಅಕ್ಷರವನ್ನು ಹೊಂದಬೇಕಾಗಿದೆ.

ಈ ಸರಣಿಯಲ್ಲಿ ನೋಂದಣಿ ಸಂಖ್ಯೆ ಪಡೆದವರು ಅದನ್ನು ಬದಲಾಯಿಸಿಕೊಳ್ಳಬಹುದಾಗಿದೆ. ವಿನಂತಿಸಿದರೆ ನಾವು ಅವುಗಳನ್ನು ಕೇಸ್-ಟು-ಕೇಸ್ ಆಧಾರದ ಮೇಲೆ ಬದಲಾಯಿಸಬಹುದು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪಿಟಿಐಗೆ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next