Advertisement

ತನ್ನ ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಫ್ಯಾಷನ್ ಡಿಸೈನರ್

03:25 PM Jul 20, 2023 | Team Udayavani |

ನವದೆಹಲಿ: ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ 26 ವರ್ಷದ ಮಹಿಳೆಯೊಬ್ಬರು ಗುರುವಾರ ಬೆಳಗ್ಗೆ ದೆಹಲಿಯ ಸಫ್ದರ್‌ಜಂಗ್ ಎನ್‌ಕ್ಲೇವ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮೃತ ಮಹಿಳೆಯನ್ನು ದೀಪಿಕಾ ಎಂದು ಗುರುತಿಸಲಾಗಿದ್ದು, ಘಟನೆ ಕುರಿತು ಪೋಷಕರು ಠಾಣೆಗೆ ದೂರು ನೀಡಿದ್ದು ಆತ್ಮಹತ್ಯೆ ಎಂದು ಶಂಕಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಮೃತರ ಕುಟುಂಬದ ಸದಸ್ಯರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಪೊಲೀಸರ ತನಿಖೆ ಬಳಿಕವೇ ಗೊತ್ತಾಗಲಿದೆ.

ಇದನ್ನೂ ಓದಿ: Merry Christmas ಲೀಡ್‌ ರೋಲ್‌ಗೆ ಸೇತುಪತಿ,ಕತ್ರಿನಾ ಆಯ್ಕೆ ಯಾಕೆ? ಕಾರಣ ತಿಳಿಸಿದ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next