Advertisement

Delhi excise policy: ದಿಲ್ಲಿ ಅಬಕಾರಿ ನೀತಿ ಆಪ್‌ ಸರಕಾರಕ್ಕೆ ಉರುಳು?

12:18 AM Oct 06, 2023 | Team Udayavani |

ದಿಲ್ಲಿ ಅಬಕಾರಿ ನೀತಿ ಸಂಬಂಧ ಆಮ್‌ ಆದ್ಮಿ ಪಕ್ಷದ ಮತ್ತೂಬ್ಬ ನಾಯಕ, ರಾಜ್ಯಸಭೆ ಸದಸ್ಯ ಸಂಜಯ್‌ ಸಿಂಗ್‌ ಬಂಧನವಾಗಿದೆ. ಈಗಾಗಲೇ ಮನೀಶ್‌ ಸಿಸೋಡಿಯಾ ಇದೇ ಕೇಸಿನಲ್ಲಿ ಜೈಲಿನಲ್ಲಿದ್ದಾರೆ. ಏನಿದು ಕೇಸ್‌? ಆಪ್‌ಗೆ ಇದರಿಂದ ಸಂಕಷ್ಟವಿದೆಯೇ?

Advertisement

ಏನಿದು ನೀತಿ?

2021ರ ನವೆಂಬರ್‌ನಲ್ಲಿ ದಿಲ್ಲಿಯ ಅರವಿಂದ ಕೇಜ್ರಿವಾಲ್‌ ಸರಕಾರವು ಹೊಸ ಅಬಕಾರಿ ನೀತಿಯನ್ನು ಘೋಷಿಸಿತು. ಈ ನೀತಿಯ ಅನ್ವಯ ಸರಕಾರವು ಲಿಕ್ಕರ್‌ನ ಚಿಲ್ಲರೆ ಮಾರಾಟವನ್ನು ಹಿಂದೆಗೆದುಕೊಂಡು, ಖಾಸಗಿಯವರಿಗೆ ಪರವಾನಿಗೆ ನೀಡಲು ಶುರು ಮಾಡಿತು. ಇದರಿಂದ ಕಪ್ಪು ಮಾರುಕಟ್ಟೆ ದಂಧೆಯ ನಿಯಂತ್ರಣವಾಗುತ್ತದೆ ಎಂಬುದು ದಿಲ್ಲಿ ಸರಕಾರದ ವಾದ. ಅಲ್ಲದೆ ಶೇ.27ರಷ್ಟು ಹೆಚ್ಚು ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು¤.

ಆರೋಪವೇನು?

2022ರ ಜುಲೈಯಲ್ಲಿ ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ನರೇಶ್‌ ಕುಮಾರ್‌, ಈ ನೀತಿ ಬಗ್ಗೆ ಆಕ್ಷೇಪವೆತ್ತಿದ್ದರು. ಇದರಲ್ಲಿ ಹಲವಾರು ನೀತಿಗಳ ಉಲ್ಲಂಘನೆಯಾಗಿದೆ ಎಂದಿದ್ದರು. ಲಿಕ್ಕರ್‌ ಪರವಾನಿಗೆ ನೀಡುವ ವೇಳೆ ಅಕ್ರಮ ನಡೆದಿದೆ. 144 ಕೋಟಿ ರೂ.ನಷ್ಟು ಪರವಾನಿಗೆ ಶುಲ್ಕವನ್ನು ವಿನಾಯಿತಿ ರೂಪದಲ್ಲಿ ನೀಡಲಾಗಿದೆ ಎಂದಿದ್ದರು. ಮುಖ್ಯ ಕಾರ್ಯದರ್ಶಿಯವರ ವರದಿಯನ್ನು ಆಧಾರವಾಗಿಟ್ಟುಕೊಂಡು ದಿಲ್ಲಿ ಲೆ| ಗವರ್ನರ್‌ ಸಿಬಿಐ ತನಿಖೆಗೆ ಆದೇಶಿಸಿದ್ದರು. ಹೀಗಾಗಿ ದಿಲ್ಲಿ ಸರಕಾರ ಹೊಸ ಅಬಕಾರಿ ನೀತಿ ಹಿಂದೆಗೆದುಕೊಂಡಿತು. 400 ಲಿಕ್ಕರ್‌ ಶಾಪ್‌ಗಳಿಗೆ ಬೀಗ ಬಿದ್ದಿತು.

Advertisement

ಸಿಬಿಐಯಿಂದ ತನಿಖೆ

2022ರ ಆಗಸ್ಟ್‌ನಲ್ಲಿ ಸಿಬಿಐ ತನಿಖೆ ಶುರು ಮಾಡಿತು. ಈ ವರ್ಷದ ಫೆಬ್ರವರಿಯಲ್ಲಿ ದಿಲ್ಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರನ್ನು ಬಂಧಿಸಿತು. ಕಳೆದ ಎಪ್ರಿಲ್‌ನಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರ ವಿಚಾರಣೆ ನಡೆಸಲಾಗಿದೆ. ಬುಧವಾರ ಸಂಜಯ್‌ ಸಿಂಗ್‌ ಅವರನ್ನು ಬಂಧಿಸಲಾಗಿದೆ. ಕೆಲವು ಅಧಿಕಾರಿಗಳ ಬಂಧನವೂ ಆಗಿದೆ. ಅಲ್ಲದೆ ಈ ಹಗರಣದ ಹಣವನ್ನು ಆಮ್‌ ಆದ್ಮಿ ಪಕ್ಷ ಗೋವಾ ಚುನಾವಣೆಯಲ್ಲಿ ವೆಚ್ಚ ಮಾಡಿದೆ ಎಂಬ ಆರೋಪವೂ ಇದೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಜತೆಗೆ ತೆಲಂಗಾಣದ ಕೆ.ಸಿ.ಚಂದ್ರಶೇಖರ ರಾವ್‌ ಪುತ್ರಿ ಕವಿತಾರಿಗೂ ಈ ಹಗರಣಕ್ಕೂ ಸಂಬಂಧವಿದೆ ಎಂಬ ಆರೋಪವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next