Advertisement

ದಿಲ್ಲಿ ಚುನಾವಣೆ: ಕಾಂಗ್ರೆಸ್‌ ಪಟ್ಟಿ ಬಿಡುಗಡೆ

10:07 AM Jan 19, 2020 | sudhir |

ಹೊಸದಿಲ್ಲಿ: ಮುಂದಿನ ತಿಂಗಳು ನಡೆಯಲಿರುವ ದಿಲ್ಲಿ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್‌ ಶನಿವಾರ 54 ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡಿದೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆಗೆ ಇದುವರೆಗೆ ಯಾರನ್ನೂ ಸೂಚಿಸಲಾಗಿಲ್ಲ.

Advertisement

ಕೇಂದ್ರದ ಮಾಜಿ ಸಚಿವೆ ಕೃಷ್ಣಾ ತೀರಥ್‌ ಅವರನ್ನು ಪಟೇಲ್‌ ನಗರ, ದಿಲ್ಲಿ ಸರಕಾರದಲ್ಲಿ ಸಚಿವರಾಗಿದ್ದ ಅರವಿಂದ ಲವಿÉ ಅವರನ್ನು ಗಾಂಧಿ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಆಮ್‌ ಆದ್ಮಿ ಪಕ್ಷದಿಂದ ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆ ಗೊಂಡ ಅಲ್ಕಾ ಲಾಂಬಾಗೆ ಟಿಕೆಟ್‌ ನೀಡಿದ್ದು, ಚಾಂದ್‌ನಿ ಚೌಕ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ದಿಲ್ಲಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೀರ್ತಿ ಆಜಾದ್‌ ಪತ್ನಿ ಪೂನಂ ಆಜಾದ್‌ ಅವರು ಸಂಗಂ ವಿಹಾರ್‌ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ಅಶೋಕ್‌ ಕುಮಾರ್‌ ವಾಲಿಯಾ ಕೃಷ್ಣಾ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಈ ನಡುವೆ, ಟಿಕೆಟ್‌ ಸಿಗದೇ ಇರುವ ಕಾರಣ ಅತೃಪ್ತಿಗೊಂಡು ಆಮ್‌ ಆದ್ಮಿ ಪಕ್ಷದ ಇಬ್ಬರು ಶಾಸಕರು ಶನಿವಾರ ರಾಜೀನಾಮೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next