Advertisement
ಮೂರೂ ಸೋಲು ಕೂಡ ಮುಂಬೈಗೆ ಕೊನೆಯ ಕ್ಷಣದ ಎಡವಟ್ಟಿನಿಂದಲೇ ಆಗಿದೆ ಎನ್ನುವುದು ಗಮನಿಸಬೇಕಾದ ಸಂಗತಿ. ಕೊನೆಯ ಓವರ್‌ನಲ್ಲಿ ಅಗತ್ಯವಿದ್ದ 11 ರನ್‌ಗಳಿಸಿ ಚಾಂಪಿಯನ್ನರಿಗೆ ನೀರು ಕುಡಿಸಿದ ಡೆಲ್ಲಿ ಡೇರ್ ಡೆವಿಲ್ಸ್ 7 ವಿಕೆಟ್ ಜಯದೊಂದಿಗೆ ಗೆಲುವಿನ ಖಾತೆ ತೆರೆಯಿತು.194 ಬಾರಿಸಿದರೂ ಗೆಲ್ಲದ ಮುಂಬೈ: ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ 20 ಓವರ್‌ಗೆ 7 ವಿಕೆಟ್‌ಗೆ 194 ರನ್‌ಗಳಿಸಿತು. ಮುಂಬೈ ಪರ ಆರಂಭಿಕ ಸೂರ್ಯ ಕುಮಾರ್ (53 ರನ್) ಮತ್ತು ಎವಿನ್ ಲೆವಿಸ್ (48 ರನ್), ಇಶಾನ್ ಕಿಶನ್ (44 ರನ್) ಸಿಡಿಸಿದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ಜೇಸನ್ ರಾಯ್ (ಅಜೇಯ 91 ರನ್), ರಿಷಭ್ ಪಂತ್ (47 ರನ್) ಹಾಗೂ ಶ್ರೇಯಸ್ ಐಯ್ಯರ್ (ಅಜೇಯ 27 ರನ್) ನೆರವಿನಿಂದ 3 ವಿಕೆಟ್‌ಗೆ 195 ರನ್‌ಗಳಿಸಿ ರೋಚಕ ಗೆಲುವು ಸಾಧಿಸಿತು.
ಮುಂಬೈ ಇಂಡಿಯನ್ಸ್ 20 ಓವರ್‌ಗೆ 194/7 (ಸೂರ್ಯ ಕುಮಾರ್ 53, ಲೆವಿಸ್ 48, ಕ್ರಿಸ್ಟಿಯಾನ್ 35ಕ್ಕೆ2), ಡೆಲ್ಲಿ ಡೇರ್ ಡೆವಿಲ್ಸ್ 20 ಓವರ್‌ಗೆ 195/3 (ರಾಯ್ ಅಜೇಯ 91, ಪಂತ್ 47, ಕೃಣಾಲ್ 21ಕ್ಕೆ2)