Advertisement

ಇಂದು ಡೆಲ್ಲಿಗೆ ಪಂಜಾಬ್‌ ಎದುರಾಳಿ ಡೆವಿಲ್ಸ್‌ಗೆ ಗೇಲ್‌ ಭಯ

06:00 AM Apr 23, 2018 | |

ಹೊಸದಿಲ್ಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಸೋಮವಾರ ನಡೆಯುವ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಅವರಿಂದ ಸ್ಫೂರ್ತಿ ಪಡೆದಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದೆ.

Advertisement

ಇಷ್ಟರವರೆಗಿನ ಐಪಿಎಲ್‌ ಕ್ರಿಕೆಟ್‌ನಲ್ಲಿ ಡೆಲ್ಲಿ ತಂಡ ಪರಿಣಾಮಕಾರಿ ನಿರ್ವಹಣೆ ನೀಡಿಲ್ಲ. ಅಗ್ರ ನಾಲ್ಕರೊಳಗಿನ ಸ್ಥಾನ ಪಡೆಯಲು ಪ್ರತಿ ಬಾರಿಯೂ ವಿಫ‌ಲವಾಗಿದೆ. ಕಳೆದ ಎರಡು ಋತುಗಳಲ್ಲಿ ಡೆಲ್ಲಿ ಆರನೇ ಸ್ಥಾನದಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಈ ಬಾರಿಯೂ ಡೆಲ್ಲಿಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಗಂಭೀರ್‌ ತಂಡದ ನೇತೃತ್ವ ವಹಿಸಿದ್ದರೂ ಗೆಲುವಿಗಾಗಿ ಒದ್ದಾಡುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿರುವ ಡೆಲ್ಲಿ ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಡಿ’ವಿಲಿಯರ್ ಅವರ ಸ್ಫೋಟಕ ಆಟದಿಂದಾಗಿ ಡೆಲ್ಲಿ ತಂಡ ಆರು ವಿಕೆಟ್‌ಗಳಿಂದ ಸೋಲುನ್ನು ಕಂಡಿತ್ತು. ಡೆಲ್ಲಿ ತಂಡ 5 ವಿಕೆಟಿಗೆ 174 ರನ್‌ ಗಳಿಸಿದ್ದರೆ ಬೆಂಗಳೂರು ತಂಡ 18 ಓವರ್‌ಗಳಲ್ಲಿ 4 ವಿಕೆಟಿಗೆ 176 ರನ್‌ ಗಳಿಸಿ ವಿಜಯಿಯಾಯಿತು. ಡೆಲ್ಲಿ ಸೋಮವಾರ ತವರಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಪಂಜಾಬ್‌ ತಂಡವನ್ನು ಎದುರಿಸಲಿದ್ದು$ಗೇಲ್‌ ಅವರನ್ನು ಹೇಗೆ ಕಟ್ಟಿಹಾಕಬೇಕೆಂಬ ಚಿಂತೆಯಲ್ಲಿದೆ.

ಅಗ್ರಸ್ಥಾನದಲ್ಲಿ ಪಂಜಾಬ್‌
ಗೇಲ್‌, ಕೆ ಎಲ್‌ ರಾಹುಲ್‌ ಅವರ ಭರ್ಜರಿ ಆಟದಿಂದಾಗಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಈ ಬಾರಿ ಕಿಂಗ್‌ ಆಗಿ ಮೆರೆಯುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿರುವ ಪಂಜಾಬ್‌ 8 ಅಂಕದೊಂದಿಗೆ ಅಗ್ರಸ್ಥಾದದಲ್ಲಿದೆ. ಗೇಲ್‌ ಅವರ ಭರ್ಜರಿ ಆಟವೇ ಪಂಜಾಬ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಗೇಲ್‌ ಒಂದು ಶತಕ ಮತ್ತು ಎರಡು ಅರ್ಧಶತಕ ಹೊಡೆದಿದ್ದಾರೆ ಈ ಪಂದ್ಯ ಅಂಕಪಟ್ಟಿಯ ಅಗ್ರಸ್ಥಾನಿ ಮತ್ತು ಕೊನೆಯ ಸ್ಥಾನದಲ್ಲಿರುವ ತಂಡಗಳ ನಡುವಣ ಹೋರಾಟವೂ ಆಗಿದೆ.

ಇನ್ನಿಂಗ್ಸ್‌ ಆರಂಭಿಸಲಿರುವ ಗೇಲ್‌ ಮತ್ತು ಕೆಎಲ್‌ ರಾಹುಲ್‌ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುವ ಸಾಧ್ಯತೆಯಿದೆ. ಯುವರಾಜ್‌ ಸಿಂಗ್‌ ಅವರಿಂದ ಉತ್ತಮ ಬ್ಯಾಟಿಂಗ್‌ ನಿರ್ವಹಣೆಯನ್ನು ನಿರೀಕ್ಷಿಸಲಾಗಿದೆ. ತಂಡದಲ್ಲಿರುವ ಆರನ್‌ ಫಿಂಚ್‌ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಆರ್‌. ಅಶ್ವಿ‌ನ್‌ ಸಹಿತ ಮೊಹಿತ್‌ ಶರ್ಮ, ಬರೀಂದರ್‌ ಸ್ರಾನ್‌, ಆ್ಯಂಡ್ರೂé ಟೈ ಮತ್ತು ಮುಜೀಬ್‌ ಉರ್‌ ರೆಹಮಾನ್‌ ತಂಡಕ್ಕೆ ಆಸರೆಯಾಗಿ ನಿಲ್ಲಬಲ್ಲರು.

Advertisement

ತಂಡಗಳು
ಡೆಲ್ಲಿ ಡೇರ್‌ಡೆವಿಲ್ಸ್‌:
ಗೌತಮ್‌ ಗಂಭೀರ್‌ (ನಾಯಕ), ರಿಷಬ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಕ್ರಿಸ್‌ ಮಾರಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಮಿತ್‌ ಮಿಶ್ರಾ, ಶಹಬಾಜ್‌ ನದೀಮ್‌, ವಿಜಯ್‌ ಶಂಕರ್‌, ರಾಹುಲ್‌ ತೆವಾಟಿಯ, ಮೊಹಮ್ಮದ್‌ ಶಮಿ, ಟ್ರೆಂಟ್‌ ಬೌಲ್ಟ್, ಕಾಲಿನ್‌ ಮುನ್ರೊ, ಡೇನಿಯಲ್‌ ಕ್ರಿಸ್ಟಿಯನ್‌, ಜಾಸನ್‌ ರಾಯ್‌, ನಮನ್‌ ಓಜಾ, ಪೃಥ್ವಿ ಶಾ, ಗುರುಕೀರತ್‌ ಸಿಂಗ್‌ ಮಾನ್‌, ಅವೇಶ್‌ ಖಾನ್‌, ಮನ್‌ಜೋತ್‌ ಕಾರ್ಲ.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌: ಕಾಎಲ್‌ ರಾಹುಲ್‌, ಮಯಾಂಕ್‌ ಅಗರ್ವಾಲ್‌, ಆರನ್‌ ಫಿಂಚ್‌, ಯುವರಾಜ್‌ ಸಿಂಗ್‌, ಕರುಣ್‌ ನಾಯರ್‌, ಡೇವಿಡ್‌ ಮಿಲ್ಲರ್‌, ಮಾರ್ಕಸ್‌ ಸ್ಟಾಯಿನಿಸ್‌, ಅಕ್ಷರ್‌ ಪಟೇಲ್‌, ಆರ್‌. ಅಶ್ವಿ‌ನ್‌ (ನಾಯಕ), ಮೊಹಿತ್‌ ಶರ್ಮ, ಆ್ಯಂಡ್ರೂé ಟೈ, ಮೊಹಿತ್‌ ಶರ್ಮ, ಮುಜೀಬ್‌ ಉರ್‌ ರೆಹಮಾನ್‌. ಕ್ರಿಸ್‌ ಗೇಲ್‌.

Advertisement

Udayavani is now on Telegram. Click here to join our channel and stay updated with the latest news.

Next