Advertisement

ಸಿಡಿದೆದ್ದ ಡೆಲ್ಲಿ ಡೆವಿಲ್ಸ್‌; ಸತತ 5 ಸೋಲಿನ ಬಳಿಕ ಡೆಲ್ಲಿಗೆ ಜಯ

12:37 PM May 03, 2017 | |

ನವದೆಹಲಿ: ಬ್ಯಾಟ್ಸ್‌ಮನ್‌ಗಳ ಸಂಘಟಿತ ಹೋರಾಟದ ಫ‌ಲವಾಗಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಐಪಿಎಲ್‌ನಲ್ಲಿ ಸನ್‌ ರೈಸರ್ ಹೈದರಾಬಾದ್‌ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದೆ. ಈ ಮೂಲಕ ಡೆಲ್ಲಿ ತಂಡ ಸತತ 5 ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿದಂತಾಗಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ತಂಡ 20 ಓವರ್‌ಗೆ 3 ವಿಕೆಟ್‌ ಕಳೆದುಕೊಂಡು 185 ರನ್‌ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಡೆಲ್ಲಿ ತಂಡ 19.1 ಓವರ್‌ಗೆ 4 ವಿಕೆಟ್‌ ಕಳೆದುಕೊಂಡು 189 ರನ್‌ ಬಾರಿಸಿ ಗುರಿ ಗೆದ್ದಿತು.

ಆರಂಭಿಕರಾಗಿ ಬಂದ ನಾಯಕ ಕರುಣ್‌ ನಾಯರ್‌ ಮತ್ತು ಸಂಜು ಸ್ಯಾಮ್ಸನ್‌ 4.1 ಓವರ್‌ಗೆ 40 ರನ್‌ ಜತೆಯಾಟ ಆಡಿ ಭದ್ರ ಅಡಿಪಾಯ ಹಾಕಿದರು. ಈ ಹಂತದಲ್ಲಿ ಸ್ಯಾಮ್ಸನ್‌(24) ವಿಕೆಟ್‌ ಕಳೆದುಕೊಂಡರು. ನಂತರ ನಾಯರ್‌ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಸಿದ್ಧಾರ್ಥ ಕೌಲ್‌ ಬೌಲಿಂಗ್‌ನಲ್ಲಿ ಭುವನೇಶ್ವರ್‌ಗೆ ಕ್ಯಾಚ್‌ ನೀಡಿದರು. 20 ಎಸೆತ ಎದುರಿಸಿದ ಕರುಣ್‌ 5 ಬೌಂಡರಿ, 2 ಸಿಕ್ಸರ್‌ ಸೇರಿದಂತೆ 39 ರನ್‌ ಬಾರಿಸಿದರು. ರಿಷಭ್‌ ಪಂತ್‌ (34), ಶ್ರೇಯಸ್‌ ಐಯ್ಯರ್‌ (33) ಕೂಡ ಉತ್ತಮ ಕಾಣಿಕೆ ನೀಡಿದರು. ನಂತರ ಕ್ರೀಸ್‌ಗೆ ಬಂದ ಕೋರಿ ಆ್ಯಂಡರ್ಸನ್‌ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿ ಡೆಲ್ಲಿಗೆ ಗೆಲುವು ತಂದರು. 24 ಎಸೆತ ಎದುರಿಸಿದ ಆ್ಯಂಡರ್ಸನ್‌ 2 ಬೌಂಡರಿ, 3 ಸಿಕ್ಸ್‌ ಸೇರಿದಂತೆ ಅಜೇಯ 41 ರನ್‌ ಬಾರಿಸಿದರು.

ಯುವರಾಜ್‌ ಆಕರ್ಷಕ ಅರ್ಧಶತಕ: ಯುವರಾಜ್‌ ಸಿಂಗ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಸನ್‌ರೈಸರ್ ಹೈದರಾಬಾದ್‌ ತಂಡ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಯಿತು.ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹೈದರಾಬಾದ್‌ ಎಂದಿನಂತೆ ಬಿರುಸಿನ ಆಟ ಆರಂಭಿಸಿತು. ಕೆಕೆಆರ್‌ ವಿರುದ್ಧ ಸ್ಫೋಟಕ ಶತಕ ಸಿಡಿಸಿದ್ದ ವಾರ್ನರ್‌ ಈ ಪಂದ್ಯದಲ್ಲೂ ಮಿಂಚಿನ ಆಟವಾಡಿದರು. ಆದರೆ 5.2 ಓವರ್‌ ತಲುಪುತ್ತಲೇ ಶಮಿ ಎಸೆತದಲ್ಲಿ ಕ್ಲೀನ್‌ಬೌಲ್ಡ್‌ ಆದರು. ಧವನ್‌ ಜತೆ ಮೊದಲ ವಿಕೆಟಿಗೆ 53 ರನ್‌ ಪೇರಿಸಿದ ಅವರು 21 ಎಸೆತ ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 30 ರನ್‌ ಗಳಿಸಿದರು.

ಧವನ್‌ ಮತ್ತು ಕೇನ್‌ ವಿಲಿಯಮ್ಸನ್‌ ಕ್ರೀಸ್‌ನಲ್ಲಿರುವಷ್ಟು ಸಮಯ ತಂಡದ ರನ್‌ವೇಗ ಸಾಧಾರಣ ಮಟ್ಟದಲ್ಲಿತ್ತು. ಆದರೆ ಕೊನೆ ಹಂತದಲ್ಲಿ ಯುವರಾಜ್‌ ಭರ್ಜರಿ ಆಟ ಪ್ರದರ್ಶಿಸಿದ್ದರಿಂದ ತಂಡದ ಮೊತ್ತ 185 ರನ್‌ ತಲುಪುವಂತಾಯಿತು. ಡೆಲ್ಲಿ ದಾಳಿಯನ್ನು ಪುಡಿಗಟ್ಟಿದ ಅವರು 41 ಎಸೆತಗಳಿಂದ 70 ರನ್‌
ಗಳಿಸಿ ಅಜೇಯರಾಗಿ ಉಳಿದರು. 11 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದ ಅವರು ಮೊಸಸ್‌ ಹೆನ್ರಿಕ್ಸ್‌ ಜತೆಗೂಡಿ ಮುರಿಯದ ನಾಲ್ಕನೇ ವಿಕೆಟಿಗೆ 93 ರನ್‌ ಪೇರಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

Advertisement

ಪಂದ್ಯದ ತಿರುವು
ಕೊನೆ 2 ಓವರ್‌ಗಳಲ್ಲಿ 12 ರನ್‌ಗಳ ಅವಶ್ಯಕತೆ ಇತ್ತು. 19ನೇ ಓವರ್‌ ಅನ್ನು ಸಿದ್ಧಾರ್ಥ್ ಕೌಲ್‌ ಎಸೆಯಲು ಬಂದರು. ಅವರ ಮೊದಲ 3 ಎಸೆತದಲ್ಲಿ ಸಿಂಗಲ್ಸ್‌ ರನ್‌ ಹರಿದು ಬಂತು. ಆದರೆ 4ನೇ ಎಸೆತವನ್ನು ಮಾರಿಸ್‌ ಸಿಕ್ಸರ್‌ಗೆ ಅಟ್ಟುವ ಮೂಲಕ ಡೆಲ್ಲಿ ಗೆಲುವು ಖಚಿತವಾಯಿತು.

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಡೇವಿಡ್‌ ವಾರ್ನರ್‌    ಬಿ ಮೊಹಮ್ಮದ್‌ ಶಮಿ    30
ಶಿಖರ್‌ ಧವನ್‌    ಸಿ ಅಯ್ಯರ್‌ ಬಿ ಮಿಶ್ರಾ    28
ಕೇನ್‌ ವಿಲಿಯಮ್ಸನ್‌    ಸಿ ಮೊರಿಸ್‌ ಬಿ ಶಮಿ    24
ಯುವರಾಜ್‌ ಸಿಂಗ್‌    ಔಟಾಗದೆ    70
ಮೊಸಸ್‌ ಹೆನ್ರಿಕ್ಸ್‌    ಔಟಾಗದೆ    25
ಇತರ:        8
ಒಟ್ಟು  (20 ಓವರ್‌ಗಳಲ್ಲಿ 3 ವಿಕೆಟಿಗೆ)    185
ವಿಕೆಟ್‌ ಪತನ: 1-53, 2-75, 3-92
ಬೌಲಿಂಗ್‌:
ಜಯಂತ್‌ ಯಾದವ್‌    4-0-26-0
ಕಾಗಿಸೊ ರಬಾಡ        4-0-59-0
ಕ್ರಿಸ್‌ ಮೊರಿಸ್‌        4-0-36-0
ಮೊಹಮ್ಮದ್‌ ಶಮಿ        4-0-36-2
ಅಮಿತ್‌ ಮಿಶ್ರಾ        4-0-23-1

ಡೆಲ್ಲಿ ಡೇರ್‌ಡೆವಿಲ್ಸ್‌
ಸಂಜು ಸ್ಯಾಮ್ಸನ್‌    ಸಿ ಧವನ್‌ ಬಿ ಸಿರಾಜ್‌    24
ಕರುಣ್‌ ನಾಯರ್‌    ಸಿ ಕುಮಾರ್‌ ಬಿ ಕೌಲ್‌    39
ರಿಷಬ್‌ ಪಂತ್‌    ಬಿ ಸಿರಾಜ್‌    34
ಶ್ರೇಯಸ್‌ ಅಯ್ಯರ್‌    ಸಿ ಸಿರಾಜ್‌ ಬಿ ಕುಮಾರ್‌    33
ಕೋರಿ ಆ್ಯಂಡರ್ಸನ್‌    ಔಟಾಗದೆ    41
ಕ್ರಿಸ್‌ ಮೊರಿಸ್‌    ಔಟಾಗದೆ    15
ಇತರ:        3
ಒಟ್ಟು  (19.1 ಓವರ್‌ಗಳಲ್ಲಿ 4 ವಿಕೆಟಿಗೆ)    189
ವಿಕೆಟ್‌ ಪತನ: 1-40, 2-72, 3-109, 4-148
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    4-0-33-1
ಮೊಹಮ್ಮದ್‌ ಸಿರಾಜ್‌        4-0-41-2
ಸಿದ್ಧಾರ್ಥ್ ಕೌಲ್‌        4-0-38-1
ಮೊಸಸ್‌ ಹೆನ್ರಿಕ್ಸ್‌        2.1-0-36-0
ರಶೀದ್‌ ಖಾನ್‌        4-0-24-0
ಯುವರಾಜ್‌ ಸಿಂಗ್‌        1-0-16-0

ಪಂದ್ಯಶ್ರೇಷ್ಠ: ಮೊಹಮ್ಮದ್‌ ಶಮಿ

Advertisement

Udayavani is now on Telegram. Click here to join our channel and stay updated with the latest news.

Next