Advertisement

ತಿಹಾರ್‌ ಜೈಲಿಗೆ ಮಾಜಿ ಗೃಹ ಸಚಿವ ಪಿ.ಚಿದಂಬರಂ

10:28 AM Sep 06, 2019 | Sriram |

ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಹಗಣರದ ಆರೋಪಿ, ಮಾಜಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ.

Advertisement

ಅದರಂತೆ ಸೆ.19ರವರೆಗೆ ಅವರನ್ನು ತಿಹಾರ್‌ ಜೈಲಿನಲ್ಲಿಡಲಾಗುತ್ತದೆ. ಆದರೆ ತಮಗೆ ಪ್ರತ್ಯೇಕ ಸೆಲ್‌, ಪಾಶ್ಚಿಮಾತ್ಯ ಶೈಲಿಯ ಶೌಚಾಲಯ, ಔಷಧಗಳು ಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ. ಚಿದಂಬರಂ ಈಗಾಗಲೇ 15 ದಿನಗಳನ್ನು ಸಿಬಿಐ ಕಸ್ಟಡಿಯಲ್ಲಿ ಇಡಲಾಗುತ್ತದೆ.

ಇಂದಿನ ವಿಚಾರಣೆ ವೇಳೆ ಚಿದಂಬರಂ ವಕೀಲರು, ಅವರನ್ನು ಬೇಕಾದರೆ ಜಾರಿ ನಿರ್ದೇಶನಾಲಯದ ವಶಕ್ಕೊಪ್ಪಿಸಬಹುದು, ನ್ಯಾಯಾಂಗ ಬಂಧನವೇಕೆ ಎಂದು ವಾದ ಮಾಡಿದರು. ಆದರೆ ಇದಕ್ಕೊಪ್ಪದ ನ್ಯಾಯಾಲಯ ಆಪಾದಿತರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ನ್ಯಾಯಾಂಗ ಬಂಧನ ಸೂಕ್ತವಾಗಿದೆ ಎಂದಿತು.

ಕಳೆದ 15 ದಿನಗಳ ಬಂಧನದ ಅವಧಿಯಲ್ಲಿ ಸಿಬಿಐ ಕಟ್ಟಡದ ಒಂದು ರೂಮಿನಲ್ಲಿ ಚಿದಂಬರಂ ಅವರನ್ನು ಇಡಲಾಗಿತ್ತು. ಈ ಮೊದಲು ತಿಹಾರ್‌ ಜೈಲಿಗೆ ಕಳಿಸುವುದಕ್ಕೂ ಚಿದಂಬರಂ ಪರ ವಕೀಲರು ಆಕ್ಷೇಪವೆತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next