ನವದೆಹಲಿ: ಇತ್ತೀಚೆಗಷ್ಟೇ ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ವಿಶೇಷ ಪೊಲೀಸರ ತಂಡ ಡಿಆರ್‌ಡಿಓ ವಿಜ್ಞಾನಿಯೊಬ್ಬರನ್ನು ಬಂಧಿಸಿದೆ.
ನೆರೆಮನೆಯಲ್ಲಿದ್ದ ವಕೀಲರನ್ನು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡುವ ಸಂಬಂಧ ಈ ಸ್ಫೋಟ ನಡೆಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಡಿ.9ರಂದು ಕೋರ್ಟ್ ರೂ.102ರಲ್ಲಿ ಲಘು ತೀವ್ರತೆಯ ಬಾಂಬ್ ಸ್ಫೋಟವೊಂದು ಸಂಭವಿಸಿತ್ತು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಡಿಆರ್‌ಡಿಓ ವಿಜ್ಞಾನಿಯನ್ನು ಬಂಧಿಸಲಾಗಿದೆ. ಸಿಸಿಟಿವಿಯಲ್ಲಿ ಎರಡು ಬಾರಿ ಇವರು ಕಂಡುಬಂದಿದ್ದಾರೆ.
ಒಮ್ಮೆ ಕೈಯಲ್ಲಿ ಬ್ಯಾಗ್‌ವೊಂದು ಇತ್ತು. ಮಗದೊಮ್ಮೆ ಬರೀ ಕೈಯಲ್ಲಿ ಹೋಗುತ್ತಿದ್ದರು. ಅನುಮಾನ ಬಂದು, ಅವರ ವಿಚಾರಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ, ಇವರು ಟಾರ್ಗೆಟ್ ಮಾಡಿದ್ದ ವ್ಯಕ್ತಿ ಇದೇ ಕೋರ್ಟ್‌ರೂಂನಲ್ಲಿ ಇದ್ದರು. ಹೀಗಾಗಿ ಆ ಕೋರ್ಟ್ ಕೊಠಡಿಗೇ ತೆರಳಿ ಟಿಫಿನ್ ಬಾಕ್ಸ್‌ವೊಂದರಲ್ಲಿ ಸ್ಫೋಟಕ ಇಟ್ಟು ಬಂದಿದ್ದರು.
ಇದನ್ನೂ ಓದಿ:ವ್ಯಕ್ತಿಯನ್ನು ಕೊಂದು ಗ್ರಾಮದಲ್ಲೇ ಹೂತಿಟ್ಟರು : ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ
ಬಂಧಿತ ವಿಜ್ಞಾನಿಯ ವಿಚಾರಣೆ ನಡೆಸಿದಾಗ, ಲಘುತೀವ್ರತೆಯ ಬಾಂಬ್ ತಯಾರಿಕೆಯ ಅರಿವು ತಮಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.