Advertisement

2008ರ ಬಾಟ್ಲಾ ಎನ್‌ಕೌಂಟರ್ ಪ್ರಕರಣ ‌: ಉಗ್ರ ಆರಿಝ್ಗೆ ಖಾನ್‌ಗೆ ಗಲ್ಲು

09:45 PM Mar 15, 2021 | Team Udayavani |

ಹೊಸದಿಲ್ಲಿ : ದಿಲ್ಲಿಯಲ್ಲಿ 2008ರಲ್ಲಿ ನಡೆದಿದ್ದ ಬಾಟ್ಲಾ ಎನ್‌ಕೌಂಟರ್‌ ವೇಳೆ ಪೊಲೀಸ್‌ ಅಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದ ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯ ಉಗ್ರ ಆರಿಝ್ ಖಾನ್‌ಗೆ ದಿಲ್ಲಿಯ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

Advertisement

ಎನ್‌ಕೌಂಟರ್‌ ನಡೆದಲ್ಲಿಂದ ತಪ್ಪಿಸಿಕೊಂಡಿದ್ದ ಆರಿಝ್ ಖಾನ್‌ನನ್ನು 2018ರ ಫೆಬ್ರವರಿಯಲ್ಲಿ ದಿಲ್ಲಿ ಪೊಲೀಸರ ವಿಶೇಷ ತಂಡ ಬಂಧಿಸಿತ್ತು. ಉತ್ತರಪ್ರದೇಶ ಮೂಲದ ಈತನನ್ನು ನ್ಯಾಯಾಲಯ ಕಳೆದ ವಾರ ಅಪರಾಧಿ ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣದ ಪ್ರಕಟನೆಯನ್ನು ಮಾ. 15ಕ್ಕೆ ನಿಗದಿಪಡಿಸಿತ್ತು. ಈತ 2008ರಲ್ಲಿ ದಿಲ್ಲಿ, ರಾಜಸ್ಥಾನ, ಗುಜರಾತ್‌ ಮತ್ತು ಉತ್ತರ ಪ್ರದೇಶಗಳಲ್ಲಿ ನಡೆದ ಸರಣಿ ಸ್ಫೋಟಗಳ ರೂವಾರಿಯೂ ಹೌದು ಎಂದು ಮೂಲಗಳು ತಿಳಿಸಿವೆ.

2008ರ ಸೆ. 19ರಂದು ದಿಲ್ಲಿಯ ಜಾಮಿಯಾ ನಗರದಲ್ಲಿರುವ ಬಾಟ್ಲಾ ಹೌಸ್‌ನಲ್ಲಿ ಅಡಗಿದ್ದ ಮುಜಾಹಿದೀನ್‌ ಉಗ್ರರು ತಮ್ಮ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ ದಿಲ್ಲಿ ಪೊಲೀಸ್‌ ವಿಶೇಷ ಕಾರ್ಯಪಡೆಯ ಸಿಬಂದಿ ಜತೆಗೆ ಗುಂಡಿನ ಚಕಮಕಿ ನಡೆಸಿದ್ದರು. ಆಗ ಕಾರ್ಯಪಡೆಯ ಇನ್‌ಸ್ಪೆಕ್ಟರ್‌ ಮೋಹನ್‌ಚಂದ್‌ ಶರ್ಮಾ ಹುತಾತ್ಮರಾಗಿದ್ದರಲ್ಲದೆ, ಇತರ ಇಬ್ಬರು ಸಿಬಂದಿ ಗಾಯಗೊಂಡಿದ್ದರು.

ಇದನ್ನೂ ಓದಿ :ನೋಟಾ: ಕೇಂದ್ರದ ಅಭಿಪ್ರಾಯ ಕೋರಿದ ಸುಪ್ರೀಂ ಕೋರ್ಟ್

Advertisement

Udayavani is now on Telegram. Click here to join our channel and stay updated with the latest news.

Next