ಮುಂಬಯಿ: ದಿಲ್ಲಿ ಉಪಚುನಾವಣೆ ಬಳಿಕ ವಿಶ್ರಾಂತಿ ಬಯಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇದೀಗ ವಿಪಶ್ಶನ ಧ್ಯಾನದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನ ಲಪ್ತಗಿರಿಯ ಕ್ಯಾಂಪ್‌ಅನ್ನು ಅವರು ಇದಕ್ಕಾಗಿ ಆಯ್ದುಕೊಂಡಿದ್ದು, 10 ದಿನ ಧ್ಯಾನದಲ್ಲಿ ಭಾಗಿಯಾಗಲಿದ್ದಾರೆ.
ಈಗಾಗಲೇ ಕೇಜ್ರಿವಾಲ್ ಅವರು ಧ್ಯಾನಕ್ಕಾಗಿ ಆಗಮಿಸಿದ್ದು, ಸೆ.11ರ ಬೆಳಗ್ಗೆ 5ರಿಂದಲೇ ಧ್ಯಾನ ಶುರುಮಾಡಿದ್ದಾರೆ ಎಂದು ಸ್ಥಳೀಯ ಆಮ್ ಆದ್ಮಿ ಮುಖಂಡರು ಹೇಳಿದ್ದಾರೆ.
ಈಗಾಗಲೇ 22 ವಿಪಶ್ಶನ ಧ್ಯಾನ ಕೋರ್ಸ್‌ಗಳನ್ನು ಕೇಜ್ರಿವಾಲ್ ಅವರು ಮಾಡಿದ್ದಾರೆ. ಸೆ.19ರಂದು ಅವರ ಧ್ಯಾನ ಕೋರ್ಸ್ ಮುಕ್ತಾಯವಾಗಲಿದೆ. ಧ್ಯಾನದ ಸಂದರ್ಭ ಯಾವುದೇ ಮಾಧ್ಯಮಗಳು ಇನ್ನಿತರ ಹೆಚ್ಚಿನ ಸೌಲಭ್ಯಗಳು ಲಭ್ಯವಿರುವುದಿಲ್ಲ.
ಈ ಮೊದಲು ಹಿಮಾಚಲ ಪ್ರದೇಶದ ಧರ್ಮಕೋರ್ಟ್‌ನಲ್ಲಿ ಕೇಜ್ರಿವಾಲ್ ವಿಪಶ್ಶನ ಧ್ಯಾನ ಕೈಗೊಂಡಿದ್ದರು.