Advertisement

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

02:25 PM Sep 23, 2024 | Team Udayavani |

ಹೊಸದಿಲ್ಲಿ: ಎಎಪಿ ನಾಯಕಿ ಅತಿಶಿ (Atishi) ಸೋಮವಾರ ದೆಹಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸಿಎಂ ಕಚೇರಿಯಲ್ಲಿ ಅವರ ಕುರ್ಚಿಯ ಪಕ್ಕದಲ್ಲಿ ಖಾಲಿ ಕುರ್ಚಿ ಇರಿಸಿ ನಿಕಟಪೂರ್ವ ಸಿಎಂ ಅರವಿಂದ್ ಕೇಜ್ರಿವಾಲ್‌ (Arvind Kejriwal) ಅವರಿಗೆ ನಿಷ್ಠೆ ತೋರಿಸಿದ್ದಾರೆ.

Advertisement

43 ವರ್ಷದ, ದೆಹಲಿಯ ಕಿರಿಯ ಮುಖ್ಯಮಂತ್ರಿ ಆತಿಶಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತನ್ನನ್ನು ರಾಮಾಯಣ ಮಹಾಕಾವ್ಯದ ಭರತನಿಗೆ ಹೋಲಿಸಿಕೊಂಡರು. ಶ್ರೀರಾಮನ ಅನುಪಸ್ಥಿತಿಯಲ್ಲಿ ಭರತ ಸಿಂಹಾಸನದ ಮೇಲೆ ರಾಮನ ಪಾದುಕೆಯಟ್ಟು ಆಳ್ವಿಕೆ ನಡೆಸಿದ್ದರು.

“ಇಂದು, ನಾನು ಭರತ ಹೊತ್ತ ಅದೇ ಹೊರೆಯನ್ನು ಹೊತ್ತಿದ್ದೇನೆ. ಅವರು ಸಿಂಹಾಸನದ ಮೇಲೆ ಶ್ರೀರಾಮನ ಪಾದುಕೆಯನ್ನಿಟ್ಟು ಆಳ್ವಿಕೆ ಮಾಡಿದಂತೆಯೇ, ಮುಂದಿನ ನಾಲ್ಕು ತಿಂಗಳ ಕಾಲ ನಾನು ಅದೇ ಉತ್ಸಾಹದಿಂದ ದೆಹಲಿಯನ್ನು ಆಳುತ್ತೇನೆ” ಎಂದು ಅತಿಶಿ ಹೇಳಿದರು.

ಮುಂಬರುವ ಚುನಾವಣೆಯಲ್ಲಿ ದೆಹಲಿಯ ಜನರು ಅರವಿಂದ್ ಕೇಜ್ರಿವಾಲ್ ಅವರನ್ನು ಶೀಘ್ರದಲ್ಲೇ ಅಧಿಕಾರಕ್ಕೆ ತರಲಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.

Advertisement

“ಈ ಕುರ್ಚಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೇರಿದ್ದು, ಫೆಬ್ರವರಿ ಚುನಾವಣೆಯಲ್ಲಿ ದೆಹಲಿಯ ಜನರು ಮತ್ತೊಮ್ಮೆ ಅವರನ್ನು ತಮ್ಮ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅಲ್ಲಿಯವರೆಗೆ, ಈ ಕುರ್ಚಿ ಈ ಕಚೇರಿಯಲ್ಲಿ ಉಳಿಯುತ್ತದೆ, ಅವರು ಹಿಂದಿರುಗುವವರೆಗೆ ಕಾಯುತ್ತದೆ” ಎಂದು ದೆಹಲಿ ನೂತನ ಸಿಎಂ ಹೇಳಿದರು.

ಅತಿಶಿ ಅವರು ಕೇಜ್ರಿವಾಲ್ ಸರ್ಕಾರದಲ್ಲಿ ಶಿಕ್ಷಣ, ಆದಾಯ, ಹಣಕಾಸು, ವಿದ್ಯುತ್ ಮತ್ತು ಪಿಡ್ಲ್ಯೂಡಿ ಸೇರಿದಂತೆ 13 ಖಾತೆಗಳನ್ನು ಉಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next