Advertisement

Delhi; ಸತ್ಯೇಂದ್ರ ಜೈನ್‌ ವಿರುದ್ಧ ತನಿಖೆಗೆ ಸಿಬಿಐ ಪತ್ರ

11:55 PM Nov 13, 2023 | Team Udayavani |

ಹೊಸದಿಲ್ಲಿ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಮಾಜಿ ಸಚಿವ ಸತ್ಯೇಂದ್ರ ಜೈನ್‌ ವಿರುದ್ಧ ತನಿಖೆಗೆ ಅನುಮತಿ ಕೋರಿ ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರಿಗೆ ಸಿಬಿಐ ಮನವಿ ಸಲ್ಲಿಸಿದೆ. ವಂಚಕ ಸುಕೇಶ್‌ ಚಂದ್ರಶೇಖರನ್‌ ಸೇರಿ  ದಂತೆ ಗಣ್ಯರಿಗೆ ಜೈಲಿನೊಳಗೆ ಐಷಾರಾಮಿ ಸೇವೆಗಳನ್ನು ಒದಗಿ ಸಲು ಆಪ್‌ ನಾಯಕ ಸತ್ಯೇಂದ್ರ ಜೈನ್‌ ಹಾಗೂ ಕಾರಾ ಗೃಹದ ಮಾಜಿ ಸೂಪರಿಂಟೆಂಡೆಂಟ್‌ ರಾಜ್‌ಕುಮಾರ್‌ 10 ಕೋಟಿ ರೂ. ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. 2018ರಿಂದ 2021ರ ಅವಧಿಯಲ್ಲಿ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಗಳನ್ನು ಒದಗಿಸಲು ಸುಕೇಶ್‌ ಚಂದ್ರಶೇಖರ್‌ನಿಂದ ಈ ಮೊತ್ತ ಪಡೆಯಲಾಗಿತ್ತು ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next