Advertisement

ಅಗ್ರ ಪೈಪೋಟಿಯಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌

11:22 PM Oct 04, 2021 | Team Udayavani |

ದುಬಾೖ: ಅಗ್ರಸ್ಥಾನಿಗಳೆರಡರ ಸಣ್ಣ ಮೊತ್ತದ ಐಪಿಎಲ್‌ ಸ್ಪರ್ಧೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 3 ವಿಕೆಟ್‌ಗಳಿಂದ ಚೆನ್ನೈಯನ್ನು ಮಣಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ5 ವಿಕೆಟಿಗೆ 136 ರನ್‌ ಗಳಿಸಿದರೆ, ಡೆಲ್ಲಿ 19.4 ಓವರ್‌ಗಳಲ್ಲಿ 7 ವಿಕೆಟಿಗೆ 139 ರನ್‌ ಬಾರಿಸಿ ತನ್ನ 10ನೇ ಜಯಭೇರಿ ಮೊಳಗಿಸಿತು; ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಲಗ್ಗೆ ಹಾಕಿತು.

ಸಣ್ಣ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ಡೆಲ್ಲಿ ಬಿರುಸಿನ ಆರಂಭ ಪಡೆಯಿತಾದರೂ ಪವರ್‌ ಪ್ಲೇ ಬಳಿಕ ಒತ್ತಡಕ್ಕೆ ಸಿಲುಕಿತು. ಕೊನೆಯಲ್ಲಿ ಹೆಟ್‌ಮೈರ್‌ ಬಿರುಸಿನ ಆಟವಾಡಿ ತಂಡವನ್ನು ದಡ ತಲುಪಿಸಿದರು. ಹೆಟ್‌ಮೈರ್‌ 18 ಎಸೆತಗಳಿಂದ 28 ರನ್‌ ಬಾರಿಸಿ ಅಜೇಯರಾಗಿ ಉಳಿದರು (2 ಬೌಂಡರಿ, 1 ಸಿಕ್ಸರ್‌). ಧವನ್‌(39).

ಅಂಬಾಟಿ ಅರ್ಧ ಶತಕ
ರಾಯುಡು ಅವರ ಅರ್ಧ ಶತಕ ಚೆನ್ನೈ ಮೊತ್ತವನ್ನು ಏರಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ರಾಯುಡು 43 ಎಸೆತಗಳಿಂದ 55 ರನ್‌ ಬಾರಿಸಿದರು. ಈ ಅಜೇಯ ಆಟದಲ್ಲಿ 5 ಫೋರ್‌, 2 ಸಿಕ್ಸರ್‌ ಸೇರಿತ್ತು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಶೇ. 70 ವೀಕ್ಷಕರಿಗೆ ಅವಕಾಶ

Advertisement

ಚೆನ್ನೈಗೆ ಈ ಬಾರಿ ಆರಂಭಿಕರಿಂದ ಹೆಚ್ಚಿನ ದೇಣಿಗೆ ಸಂದಾಯವಾಗಲಿಲ್ಲ. ಫಾ ಡು ಪ್ಲೆಸಿಸ್‌ (10) ಮತ್ತು ಋತುರಾಜ್‌ ಗಾಯಕ್ವಾಡ್‌ (13) ಅಕ್ಷರ್‌ ಪಟೇಲ್‌ ತಮ್ಮ ಮೊದಲ ಓವರ್‌ನಲ್ಲೇ ಡು ಪ್ಲೆಸಿಸ್‌ ವಿಕೆಟ್‌ ಉಡಾಯಿಸಿದರೆ, ನೋರ್ಜೆ ಇನ್‌ಫಾರ್ಮ್ ಓಪನರ್‌ ಗಾಯಕ್ವಾಡ್‌ಗೆ ಕಂಟಕವಾಗಿ ಪರಿಣಮಿಸಿದರು. ಸ್ಪಿನ್‌ದ್ವಯರಾದ ಅಕ್ಷರ್‌-ಅಶ್ವಿ‌ನ್‌ ಚೆನ್ನೈಗೆ ಸವಾಲಾಗಿ ಕಾಡಿದರು. ಇವರಿಬ್ಬರು 8 ಓವರ್‌ಗಳಿಂದ ಕೇವಲ 38 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕೆಡವಿದರು.

ಸಂಕ್ಷಿಪ್ತ ಸ್ಕೋರ್‌: ಚೆನ್ನೈ-5 ವಿಕೆಟಿಗೆ 136 (ರಾಯುಡು ಔಟಾಗದೆ 55, ಉತ್ತಪ್ಪ 19, ಅಕ್ಷರ್‌ 18ಕ್ಕೆ 2, ಅಶ್ವಿ‌ನ್‌ 20ಕ್ಕೆ 1). ಡೆಲ್ಲಿ- 19.4 ಓವರ್‌ಗಳಲ್ಲಿ 7 ವಿಕೆಟಿಗೆ 139 (ಧವನ್‌ 39, ಹೆಟ್‌ಮೈರ್‌ ಅಜೇಯ 28, ಠಾಕೂರ್‌ 13ಕ್ಕೆ 2, ಜಡೇಜ 28ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next