Advertisement

ಡೆಲ್ಲಿ- ಕೊಲ್ಕತ್ತಾ ಕಾಳಗ: 18 ರನ್ ಗಳಿಂದ ಸೋತ KKR

11:41 PM Oct 03, 2020 | mahesh |

ಅಬುಧಾಬಿ: ಕೆಕೆಆರ್‌ ವಿರುದ್ಧದ ಶನಿವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 18 ರನ್ನುಗಳಿಂದ ಗೆಲುವು ಸಾಧಿಸಿತು. 229 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಕೆಕೆಆರ್ 20 ಓವರ್‌ಗಳಲ್ಲಿ 8 ವಿಕೆಟಿಗೆ 210 ರನ್‌ ಗಳಿಸಲಷ್ಟೆ ಶಕ್ತವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾಯಿತು.

Advertisement

ಗುರಿ ಬೆನ್ನೆತ್ತಿದ ಕೆಕೆಆರ್ ಆರಂಭಿಕ ಬ್ಯಾಟ್ಸ್ ಮ್ಯಾನ್ ಸುನಿಲ್ ನರೈನ್ (3) ಬೇಗನೆ ತಮ್ಮ ವಿಕೆಟ್ ನೀಡಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು. ಶುಭ್ ಮನ್ ಗಿಲ್ (28) ತಕ್ಕ ಮಟ್ಟಿನ ಹೋರಾಟವನ್ನು ನೀಡಿದರು. ನಿತೀಶ್ ರಾಣಾ 58 ರನ್ ಗಳಿಂದ ತಂಡಕ್ಕೆ ಆಸರೆ ಆದರು. ಮತ್ತೆ ಕ್ರಿಸ್ ಬಂದ ಯಾವೊಬ್ಬ ದಾಂಡಿಗರು ಹೆಚ್ಚೋತ್ತು ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಆಂಡ್ರೆ ರಸ್ಸೆಲ್(13) , ನಾಯಕ ದಿನೇಶ್ ಕಾರ್ತಿಕ್ (6), ಇಯೊನ್ ಮೋರ್ಗಾನ್ (44),  ಆಂಡ್ರೆ ರಸ್ಸೆಲ್(13), ಪ್ಯಾಟ್ ಕಮ್ಮಿನ್ಸ್ (5), ರಾಹುಲ್ ತ್ರಿಪಾಠಿ (36) ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗಿಳಿದ ಡೆಲ್ಲಿ, ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿತು. 20 ಓವರ್‌ ಮುಗಿದಾಗ 4 ವಿಕೆಟ್‌ ನಷ್ಟಕ್ಕೆ 228 ರನ್‌ ಚಚ್ಚಿತು. ಆರಂಭಿಕನಾಗಿ ಬಂದ ಪೃಥ್ವಿ ಶಾ 41 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ನೆರವಿನಿಂದ 66 ರನ್‌ ಚಚ್ಚಿದರು. ಇನ್ನೊಬ್ಬ ಆರಂಭಿಕ ಶಿಖರ್‌ ಧವನ್‌ ತಮ್ಮ ನಿರಾಶಾದಾಯಕ ಆಟ ಮುಂದುವರಿಸಿ 26 ರನ್‌ಗೆ ವಿಕೆಟ್‌ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಶ್ರೇಯಸ್‌ ಐಯ್ಯರ್‌, ಬರೀ 38 ಎಸೆತಗಳಲ್ಲಿ ಭರ್ಜರಿ 7 ಬೌಂಡರಿ, 6 ಸಿಕ್ಸರ್‌ಗಳ ಮೂಲಕ 88 ರನ್‌ ಬಾರಿಸಿದರು. ಇದರಲ್ಲಿ 64 ರನ್‌ ಬೌಂಡರಿ, ಸಿಕ್ಸರ್‌ಗಳ ಮೂಲಕವೇ ಬಂದಿದೆ. ಓಡಿ ಗಳಿಸಿದ್ದು ಕೇವಲ 24 ರನ್‌. ಕೋಲ್ಕತದ ಅತಿರಥ, ಮಹಾರಥ ಬೌಲರ್‌ಗಳೆಲ್ಲ ಹೆದರಿ ಕಂಗಾಲಾದರು. ಇಲ್ಲಿ ತುಸು ಯಶಸ್ಸು ಸಾಧಿಸಿದ ಬೌಲರ್‌ ಎಂದರೆ ವೇಗಿ ಆಂಡ್ರೆ ರಸೆಲ್‌. ಅವರು 29 ರನ್‌ ನೀಡಿ 2 ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next