Advertisement

ಕೋವಿಡ್‌ ಹೋರಾಟಕ್ಕೆ ರಾಜಸ್ಥಾನ್‌ ರಾಯಲ್ಸ್‌ ,ಡೆಲ್ಲಿ ನೆರವು

11:27 PM Apr 29, 2021 | Team Udayavani |

ಕೋವಿಡ್ ವಿರುದ್ಧದ ಹೋರಾಟಕ್ಕೆ ಐಪಿಎಲ್‌ನ ಪ್ರಮುಖ ಫ್ರಾಂಚೈಸಿಯಾದ ರಾಜಸ್ಥಾನ್‌ ರಾಯಲ್ಸ… ಕೈ ಜೋಡಿಸಿದೆ. 7.5 ಕೋಟಿ ರೂ. ಮೊತ್ತದ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.

Advertisement

“ಕೋವಿಡ್ ವೈರಸ್‌ನ ತೀವ್ರ ಏರಿಕೆಯಿಂದಾಗಿ ಭಾರತದ ಜನರಿಗೆ ತತ್‌ಕ್ಷಣವೇ ಸಹಾಯವಾಗುವ ನಿಟ್ಟಿನಲ್ಲಿ ರಾಜಸ್ಥಾನ್‌ ರಾಯಲ್ಸ್  7.5 ಕೋಟಿ ರೂ. ದೇಣಿಗೆಯಾಗಿ ನೀಡಲಿದೆ’ ಎಂದು ಫ್ರಾಂಚೈಸಿ ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿದೆ.

ಬ್ರಿಟಿಷ್‌ ಏಶ್ಯನ್‌ ಟ್ರಸ್ಟ್‌ ಸಹಭಾಗಿತ್ವದಲ್ಲಿ “ರಾಯಲ್‌ ರಾಜಸ್ಥಾನ್‌ ಫೌಂಡೇಶನ್‌’ ಇದಕ್ಕಾಗಿ ಕಾರ್ಯ ನಿರತವಾಗಿದೆ ಎಂದು ತಂಡದ ಪ್ರಕಟನೆ ತಿಳಿಸಿದೆ.

ಡೆಲ್ಲಿಯಿಂದ 1.5 ಕೋ. ರೂ.  :

ಡೆಲ್ಲಿ ಕ್ಯಾಟಪಿಟಲ್ಸ್‌ ಕೂಡ ಪ್ರಾಣವಾಯು ಖರೀದಿಗೆ ಕೈ ಜೋಡಿಸಿದ್ದು “ಪಿಎಂ ಕೇರ್ಸ್‌ ನಿಧಿ’ಗೆ 1.5 ಕೋ. ರೂ. ಆರ್ಥಿಕ ನೆರವು ನೀಡಿದೆ.

Advertisement

ಸಚಿನ್‌ ಒಂದು ಕೋಟಿ ರೂ. ನೆರವು :

ಹೊಸದಿಲ್ಲ: ದೇಶದಲ್ಲಿ ಕೋವಿಡ್ ಸೋಂಕಿನಿಂದ  ನರಳುತ್ತಿರುವವರ ರಕ್ಷಣೆಗಾಗಿ ಆಮ್ಲಜನಕ ವ್ಯವಸ್ಥೆ ಮಾಡಲು ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ “ಮಿಷನ್‌ ಆಕ್ಸಿಜನ್‌’ ಯೋಜನೆಯಡಿ ಒಂದು ಕೋಟಿ ರೂ. ಆರ್ಥಿಕ ನೆರವು ನೀಡಿದ್ದಾರೆ. ಅನಿಲದಲ್ಲಿರುವ ಆಮ್ಲಜನಕವನ್ನಷ್ಟೇ ರೋಗಿಗಳಿಗೆ ಪೂರೈಸುವ ಸಾಧನ ಖರೀದಿಗೆ (ಆಕ್ಸಿಜನ್‌ ಕಾನ್ಸೆಂಟ್ರೇಟರ್‌) ಈ ಮೊತ್ತವನ್ನು ವ್ಯಯಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next