ಹೊಸದಿಲ್ಲಿ: ತನ್ನ ಸಿಬ್ಬಂದಿಯನ್ನು ಕೊಂದ ಆರೋಪದಡಿಯಲ್ಲಿ ಜವುಳಿ ಉದ್ಯಮಿಯನ್ನು ದಿಲ್ಲಿಯ ಸರೋಜಿನಿ ನಗರ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಉದ್ಯಮಿಯ ಸೋದರಳಿಯ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಶರ್ಮಾ ತಿಳಿಸಿದ್ದಾರೆ.
ಆರೋಪಿಗಳು 22 ವರ್ಷದ ಅಂಗಡಿ ಉದ್ಯೋಗಿಯನ್ನು ಕೊಂದು, ಆತನ ಶವವನ್ನು ಟ್ರಾಲಿ ಬ್ಯಾಗ್ ನಲ್ಲಿ ಇರಿಸಿ ದಕ್ಷಿಣ ದೆಹಲಿಯ ಮಾರುಕಟ್ಟೆಯ ಸಮೀಪವಿರುವ ಸರೋಜಿನಿ ನಗರದ ಮೆಟ್ರೋ ನಿಲ್ದಾಣದ ಹೊರಗೆ ಇಟ್ಟಿದ್ದರು.
ಉದ್ಯೋಗಿ ಇಬ್ಬರು ಮಕ್ಕಳನ್ನು ಹೊಂದಿರುವ 36 ವರ್ಷದ ಉದ್ಯಮಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಕೊಲೆಯಾದ ಉದ್ಯೋಗಿಯು ವೀಡಿಯೊವನ್ನು ರೆಕಾರ್ಡ್ ಮಾಡಿ ವ್ಯಾಪಾರಿಯಿಂದ ಹಣವನ್ನು ಸುಲಿಗೆ ಮಾಡಲು ಬಳಸಿದ್ದಾರೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಉದ್ಯೋಗಿ ಉದ್ಯಮಿಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಯೋಜನೆ ರೂಪಿಸಿದ್ದ ಉದ್ಯಮಿ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಾಸಿಸುವ ತನ್ನ ಸೋದರಳಿಯನನ್ನು ಜನವರಿ 28 ರಂದು ದೆಹಲಿಗೆ ಕರೆಸಿಕೊಂಡಿದ್ದ. ಸರೋಜಿನಿ ನಗರದಿಂದ 3 ಕಿಮೀ ದೂರದಲ್ಲಿರುವ ದಕ್ಷಿಣ ದೆಹಲಿಯ ಯೂಸುಫ್ ಸರಾಯ್ ನಲ್ಲಿರುವ ಅತಿಥಿಗೃಹದಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದರು.
ಇದನ್ನೂ ಓದಿ:ಬಜೆಟ್ ಕುರಿತು ಟೀಕೆ: ಡಿ.ಕೆ.ಸುರೇಶ್ ಗೆ ಡಾ.ಅಶ್ವತ್ಥ ನಾರಾಯಣ,ರೇಣುಕಾಚಾರ್ಯ ತಿರುಗೇಟು
ಈ ವ್ಯಕ್ತಿಗಳು ದೊಡ್ಡ ಟ್ರಾಲಿ ಬ್ಯಾಗ್ ಅನ್ನು ಹೊತ್ತೊಯ್ಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೋ ಕೆಲಸಕ್ಕಾಗಿ ಉದ್ಯೋಗಿಯನ್ನು ಅತಿಥಿಗೃಹಕ್ಕೆ ಕರೆದ ಅವರು ಅತಿಥಿಗೃಹದ ಬಟ್ಟೆ ಒಣಗಿಸುವ ಹಗ್ಗದಿಂದ ಅವನನ್ನು ಕಟ್ಟಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.