Advertisement

ದೆಹಲಿ ಅಸೆಂಬ್ಲಿಯೊಳಗೆ ಘೋಷಣೆ, ಗದ್ದಲ;ಇಬ್ಬರು ಯುವಕರಿಗೆ ಜೈಲುಶಿಕ್ಷೆ

06:03 PM Jun 28, 2017 | Team Udayavani |

ನವದೆಹಲಿ:ಇಬ್ಬರು ಅಪರಿಚಿತ ವ್ಯಕ್ತಿಗಳು ದಿಢೀರನೆ ದಿಲ್ಲಿಯ ಅಸೆಂಬ್ಲಿಯೊಳಗೆ ನುಗ್ಗಿ ಗದ್ದಲ ನಡೆಸಿ ಇಂಕಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದ ಘಟನೆ ಬುಧವಾರ ಬೆಳಗ್ಗೆ ನಡೆದಿದ್ದು, ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಇಬ್ಬರಿಗೂ ಒಂದು ತಿಂಗಳು ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

Advertisement

ಕಲಾಪ ನಡೆಯುತ್ತಿದ್ದ ವೇಳೆಯಲ್ಲಿಯೇ ಇಬ್ಬರು ಯುವಕರು ಪೇಪರ್ ಮಿಸೈಲ್ಸ್ ಅನ್ನು ಸದನದೊಳಕ್ಕೆ ತೂರಿದ್ದರು. ಇಬ್ಬರೂ ಸದನದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ದಿಢೀರನೆ ಸದನದೊಳಗೆ ಪೇಪರ್ ಮಿಸೈಲ್ ತೂರಿ ಇಂಕಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಸದನದ ಪಾವಿತ್ರ್ಯತೆಯನ್ನು ಹಾಳುಗೆಡವಿದ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ಶಾಸಕರು ಆಗ್ರಹಿಸಿದ್ದರು. ಕೂಡಲೇ ಭದ್ರತಾ ಸಿಬ್ಬಂದಿಗಳು ಭದ್ರತಾ ಸಿಬ್ಬಂದಿಗಳು ಅವರನ್ನು ಹೊರಗೆ ಎಳೆದೊಯ್ದಿದ್ದರು.  ಈ ಸಂದರ್ಭದಲ್ಲಿ ಕೆಲವು ಆಮ್ ಆದ್ಮಿ ಪಕ್ಷದ ಶಾಸಕರು ಯುವಕರ ಮೇಲೆ ಹರಿಹಾಯ್ದು ಜಗ್ಗಾಡಿದ ಘಟನೆ ನಡೆಯಿತು ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next