Advertisement

ದಿಲ್ಲಿಯಲ್ಲಿ ಮಾಲಿನ್ಯದ ಲಾಕ್‌ಡೌನ್‌!

11:44 PM Nov 12, 2021 | Team Udayavani |

ಹೊಸದಿಲ್ಲಿ: ದಿಲ್ಲಿಯ ವಾಯು ಮಂಡಲ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ), ದಿಲ್ಲಿಯ ಜನರಿಗೆ ಮಾಲಿನ್ಯ ನಿಯಂತ್ರಣಕ್ಕಾಗಿ ಕೆಲವಾರು ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಸರಕಾರಿ, ಖಾಸಗಿ ಕಚೇರಿಗಳು ತಮ್ಮ ವಾಹನಗಳ ಬಳಕೆಯನ್ನು ಶೇ. 30ರಷ್ಟು ಇಳಿಸ ಬೇಕು.

Advertisement

ದಿಲ್ಲಿಯ ಇಂದಿನ ಪರಿಸ್ಥಿತಿ ಆರೋಗ್ಯವಂತರನ್ನೂ ರೋಗಸ್ಥರನ್ನಾಗಿ ಸುತ್ತದೆ. ಹಾಗಾಗಿ ದಿಲ್ಲಿಯ ಸಾರ್ವ ಜನಿಕರು ಅಗತ್ಯವಿದ್ದರೆ ಮಾತ್ರ ಮನೆಗ ಳಿಂದ ಆಚೆಗೆ ಬರಬೇಕು ಎಂದು ಸೂಚಿಸಿದೆ. ಅಲ್ಲಿಗೆ ಕೊರೊನಾದಿಂದ ಮನೆಗಳಲ್ಲೇ ಬಂಧಿತರಾಗಿದ್ದ ದಿಲ್ಲಿ ನಿವಾಸಿಗಳು, ಈಗ ಮಾಲಿನ್ಯದ ದುಷ್ಪರಿಣಾಮಗಳಿಂದಲೂ ಲಾಕ್‌ಡೌನ್‌ ಅನುಭವಿಸುವಂತಾಗಿದೆ.

ಇದಲ್ಲದೆ ದಿಲ್ಲಿಯಲ್ಲಿನ ಕೆಟ್ಟ ಗಾಳಿ, ಇತರ ರಾಜ್ಯಗಳಿಗೂ ವ್ಯಾಪಿಸುವ ಸಾಧ್ಯತೆಯಿರುವುದರಿಂದ ಅಂಥ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಸಿಬಿ, ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next