Advertisement

Delhi; ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಪರಿಸರ ಸಚಿವರ ಸಭೆ,ಕ್ರಮಗಳ ನಿಗದಿ

07:14 PM Oct 23, 2023 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (AQI) ಸೋಮವಾರ ಬೆಳಗ್ಗೆ ಮತ್ತಷ್ಟು ಹದಗೆಟ್ಟಿದ್ದು “ಅತ್ಯಂತ ಕಳಪೆ” ವಿಭಾಗದಲ್ಲಿಕಂಡುಬಂದಿದೆ.

Advertisement

ಹೆಚ್ಚುತ್ತಿರುವ ಮಾಲಿನ್ಯದ ಮಟ್ಟಕ್ಕೆ ಪ್ರತಿಕ್ರಿಯೆಯಾಗಿ ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಅವರು ಕೇಂದ್ರ ಸರಕಾರದ ಮಾಲಿನ್ಯ ನಿಯಂತ್ರಣ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ತೊಡಗಿರುವ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿದ್ದಾರೆ.ದೆಹಲಿಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಯ ಎರಡನೇ ಹಂತದ ಅನುಷ್ಠಾನಕ್ಕೆ ಅವರು ಒತ್ತು ನೀಡಿದ್ದು, ಮಾಲಿನ್ಯ ಮೂಲಗಳ ಮೇಲೆ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ ಮತ್ತು ಬಸ್ಸುಗಳು ಮತ್ತು ರೈಲುಗಳ ಆವರ್ತನದಂತಹ ಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.

ದೆಹಲಿ ಸರಕಾರ ಕೈಗೊಂಡಿದ್ದ ವಾಹನ ಮಾಲಿನ್ಯವನ್ನು ಕಡಿಮೆ ಮಾಡುವ ಅಭಿಯಾನವನ್ನು ಮರುಪ್ರಾರಂಭಿಸಲು ಸರಕಾರ ಮುಂದಾಗಿದೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅಭಿಯಾನದ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದರಿಂದ ದೆಹಲಿ ಅಭಿಯಾನ ಸ್ಥಗಿತಗೊಳಿಸಿದ ಒಂದು ವರ್ಷದ ನಂತರ ಮತ್ತೆ ನಡೆಸಲು ಮುಂದಾಗಿದೆ. ಈ ವರ್ಷ ” ರೆಡ್ ಲೈಟ್ ಗಾಡಿ ಆಫ್” ಅಭಿಯಾನಕ್ಕೆ ರಾಜ್ಯಪಾಲರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸರಕಾರದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next