Advertisement

ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯ : ಕಳಪೆ ಮಟ್ಟಕ್ಕೆ ಮುಟ್ಟಿದ ಮಾಲಿನ್ಯದ ಸ್ಥಿತಿ

07:53 PM Nov 04, 2021 | Team Udayavani |

ನವದೆಹಲಿ : ದೇಶದಲ್ಲೆಲ್ಲ ದೀಪಾವಳಿಯ ಸಂಭ್ರಮವಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಗೆ ಮಾತ್ರ ವಾಯುಮಾಲಿನ್ಯದ ಚಿಂತೆ. ಗುರುವಾರ ಸಂಜೆಯಷ್ಟೊತ್ತಿಗೆ ಅಲ್ಲಿನ ಮಾಲಿನ್ಯದ ಸ್ಥಿತಿ ಅತ್ಯಂತ ಕಳಪೆ ಮಟ್ಟಕ್ಕೆ ಮುಟ್ಟಿದೆ.

Advertisement

ವಾಯು ಗುಣಮಟ್ಟ ಸೂಚ್ಯಂಕದ (ಏರ್‌ ಕ್ವಾಲಿಟಿ ಇಂಡೆಕ್ಸ್‌) ಪ್ರಕಾರ ಮಾಲಿನ್ಯದ ಪ್ರಮಾಣ 395 ಅಂಕಗಳಿಷ್ಟಿದೆ. ಒಂದು ವೇಳೆ ದೆಹಲಿಯಲ್ಲಿ ಪಟಾಕಿ ಸಿಡಿಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಆದ್ದರಿಂದ ಅಲ್ಲಿನ ಸರ್ಕಾರ ಪಟಾಕಿ ಹೊಡೆಯದಂತೆ ಕಡ್ಡಾಯವಾಗಿ ಸೂಚಿಸಿದೆ.

ದೆಹಲಿ ವಿಶ್ವವಿದ್ಯಾಲಯ, ಪುಸಾ, ಲೋಧಿ ರಸ್ತೆ, ಮಥುರಾ ರಸ್ತೆ, ಐಐಟಿ ದೆಹಲಿ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಕಡೆಗಳಲ್ಲಿ ಮಾಲಿನ್ಯ ಬಹಳ ತೀವ್ರವಾಗಿದೆ. ಹಾಗೆ ದೆಹಲಿಗೆ ಸಮೀಪವಿರುವ ಗುರುಗ್ರಾಮ, ನೋಯ್ಡಾದಲ್ಲೂ ಪರಿಸ್ಥಿತಿ ಹದಗೆಟ್ಟಿದೆ.

ಇದನ್ನೂ ಓದಿ : ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಎಗರಿಸಿದ ಕಳ್ಳರಿಗೆ ಜೈಲು ದಾರಿ ತೋರಿಸಿದ ಪೊಲೀಸರು

Advertisement

Udayavani is now on Telegram. Click here to join our channel and stay updated with the latest news.

Next