Advertisement

ಬೆಚ್ಚಿ ಬಿದ್ದ ದೆಹಲಿ:ಒಂದೇ ಮನೆಯಲ್ಲಿ 11 ಮಂದಿಯ ಶವಗಳು ಪತ್ತೆ!

09:26 AM Jul 01, 2018 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳುವ ಘಟನೆಯೊಂದರಲ್ಲಿ ಒಂದೇ ಮನೆಯಲ್ಲಿ  ನೇಣಿಗೆ ನೇತಾಡುತ್ತಿದ್ದ ಸ್ಥಿತಿಯಲ್ಲಿ 11 ಮಂದಿ ಶವವಾಗಿ ಪತ್ತೆಯಾಗಿದ್ದಾರೆ. 

Advertisement

ಬುರಾರಿ ಪ್ರದೇಶದ ಮನೆಯೊಂದರಲ್ಲಿ ಬೆಳಗ್ಗೆ ಶವಗಳು ಪತ್ತೆಯಾಗಿದ್ದು, ಶವಗಳ ಪೈಕಿ 7 ಮಹಿಳೆಯರದ್ದಾಗಿದ್ದು 4 ಪುರುಷರದ್ದು, ಎಲ್ಲರೂ ಒಂದೇ ಕುಟುಂಬದವರಾಗಿದ್ದು  ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತ ವಾಗಿದೆ. 

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಹೆಚ್ಚಿನ ಶವಗಳಲ್ಲಿ ಬಾಯಿ ಮತ್ತು ಕಣ್ಣುಗಳಿಗೆ ಬಟ್ಟೆಯ ತುಂಡು ಕಟ್ಟಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ನಿಗೂಢ ಪ್ರಕರಣದ ಕುರಿತಾಗಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next