Advertisement

ದೆಹಲಿ ಅಸೆಂಬ್ಲಿಯಲ್ಲಿ ಪೇಪರ್‌ ಮಿಸೈಲ್‌ ತೂರಿದವರಿಗೆ ಥಳಿತ

03:45 AM Jun 29, 2017 | Team Udayavani |

ನವದೆಹಲಿ: ದೆಹಲಿ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ವೇಳೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರತ್ತ ಪೇಪರ್‌ ಮಿಸೈಲ್‌ ಅನ್ನು ತೂರಿ ಬಿಟ್ಟ ಇಬ್ಬರು ವ್ಯಕ್ತಿಗಳನ್ನು ಆಪ್‌ ಶಾಸರು ಥಳಿಸಿದ್ದಾರೆ. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು. ಸದನದಲ್ಲಿ ಕಲಾಪ ನಡೆಯುತ್ತಿದ್ದಂತೆ ವೀಕ್ಷಕರ ಗ್ಯಾಲರಿಯಲ್ಲಿ ಮುಂಡಾಸು ಧರಿಸಿದ ಇಬ್ಬರು ವ್ಯಕ್ತಿಗಳು ಕಾಗದದಿಂದ ತಯಾರಿಸಿದ ಮಿಸೈಲ್‌ ಅನ್ನು ಮುಖ್ಯಮಂತ್ರಿಯತ್ತ ಹಾರಿಬಿಟ್ಟರು. ಇದರ ಜತೆಗೆ ಇಂಕಿಲಾಬ್‌ ಜಿಂದಾಬಾದ್‌ ಎಂಬ ಘೋಷಣೆಯನ್ನೂ ಹಾಕಿದರು. ಇದೇ ಸಂದರ್ಭದಲ್ಲಿ ಅವರತ್ತ ಸದನದ ಭದ್ರತಾ ಸಿಬ್ಬಂದಿ ಧಾವಿಸಿದರು.

Advertisement

ಭದ್ರತಾ ಸಿಬ್ಬಂದಿ ಅವರನ್ನು ಸದನದಿಂದ ಹೊರಗೆ ಎಳೆದುಕೊಂಡು ಹೋಗುತ್ತಿದ್ದಂತೆಯೇ ಕುಪಿತಗೊಂಡಿದ್ದ ಆಪ್‌ ಶಾಸಕರಾದ ಅಮಾನತುಲ್ಲಾ ಖಾನ್‌, ನಿತಿನ್‌ ತ್ಯಾಗಿ ಮತ್ತು ಇತರ ಹಲವರು ಇಬ್ಬರತ್ತ ನುಗ್ಗಿ ಮನಬಂದಂತೆ ಥಳಿಸಿದರು. ಸುಮಾರು ಮೂವತ್ತು ನಿಮಿಷಗಳ ಕಾಲ ಸದನದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಸದನಕ್ಕೆ ಅಗೌರವ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ನಿರ್ಣಯ ಮಂಡಿಸಿ, ಅಂಗೀಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next