ಹಿಂದಿನ ಕಾಲದಲ್ಲಿ ಮನೇಲಿ ಒಂದು ಕೀಪ್ಯಾಡ್ ಫೋನ್ ಇದ್ರೆ ಅದೇ ದೊಡ್ಡದು. ಆದರೆ, ಈಗಂತೂ ಮನೇಲಿ ನಾಲ್ಕು ಜನ ಇದ್ರೆ ಎಲ್ಲರ ಕೈಯಲ್ಲೂ ಅಂಡ್ರಾಯ್ಡ್ ಫೋನ್ ಇರುತ್ತೆ. ಹಾಗೇ ಅದರ ಜೊತೆ ಕೆಲವೊಂದಿಷ್ಟು ಆ್ಯಪ್‌ಗ್ಳು ಕೂಡ ಫ್ರೀಯಾಗಿ ಬರುತ್ತವೆ. ಅವುನಮಗೆ ಉಪಯೋಗ ಇವೆಯೊ ಇಲ್ವೋ ಗೊತ್ತಿಲ್ಲದೆ ಇಟ್ಕೊಂಡಿರ್ತೀವಿ. ಅವುಗಳನ್ನ ಹಾಗೇ ಇಟ್ಕೊಂಡರೆ ಮೆಮೊರಿ ಟ್ರಾಫಿಕ್ ಜಾಮ್ ಆಗಿಮೊಬೈಲ್ ಹ್ಯಾಂಗ್ ಆಗೋಕೆ ಸ್ಟಾರ್ಟ್ ಆಗುತ್ತೆ, ಸ್ಲೋ ಆಗುತ್ತೆ. ನಾವು ಅವುಗಳ ಬಗ್ಗೆ ಅಷ್ಟಾಗಿ ಯೋಚನೆ ಕೂಡ ಮಾಡಿರಲ್ಲ. ಗೊತ್ತಿದ್ದೋ ಗೊತ್ತಿಲ್ಲದೋ ಅವು ನಮ್ಮ ಮೊಬೈಲ್ ಜೊತೆಗೇ ಇರುತ್ತವೆ. ಅವುಗಳನ್ನ ಡಿಲೀಟ್ ಮಾಡಿದ್ರೆಮೊಬೈಲ್ ಸ್ಪೀಡ್ ಜಾಸ್ತಿ ಆಗುತ್ತೆ. ಯಾವುದೇ ಅಡಚಣೆ ಇಲ್ಲದೆ ಕೆಲಸಗಳು ಸುಗಮವಾಗಿ ಸಾಗುತ್ತವೆ
ಜೀವನದಲ್ಲೂ ಕೂಡ ಹಾಗೆಯೇ. ಕೆಲವೊಂದಿಷ್ಟು ಜನ ಇರ್ತಾರೆ, ಅವರಿಂದ ನಮ್ಮ ಜೀವನ ಸ್ಲೋ ಆಗಿರುತ್ತೆ. ಆ್ಯಪ್‌ಗಳು ಟೈಮ್ ಟೈಮ್‌ಗೆ ಸರಿಯಾಗಿ ನೋಟಿಫಿಕೇಷನ್ಸ್ ಕಳಿಸೋ ಹಾಗೆ ಇವರು ನಮ್ ಕಾಲುಗಳನ್ನ ಕಾಲಕಾಲಕ್ಕೆ ಸರಿಯಾಗಿ ಎಳೀತಿರ್ತಾರೆ. ಮೊಬೈಲಲ್ಲಿರೋ ಎಲ್ಲಾ ಆ್ಯಪ್ ಗಳೂ ನಮಗೆ ಕಿರಿಕಿರಿ ಉಂಟುಮಾಡುತ್ತವೆ ಅಂತಲ್ಲ, ಅದರಲ್ಲೂ ಕೂಡ ಮೊಬೈಲ್ ಸ್ಪೀಡ್ ಜಾಸ್ತಿ ಮಾಡೋ ಬೂಸ್ಟರ್ ಆ್ಯಪ್‌ಗ್ಳೂ ಕೂಡ ಇರ್ತಾವೆ. ಮೊಬೈಲ್ ಪ್ರೊಟೆಕ್ಷನ್‌ಮಾಡೋ ಆ್ಯಪ್ ಗಳೂ ಇರ್ತಾವೆ. ಅಂತಹುಗಳನ್ನ ನಾವು ಜೋಪಾನವಾಗಿಕಾಪಾಡಿಕೊಳ್ಳಬೇಕು.ಹಾಗೆಯೇ ಜೀವನದಲ್ಲಿಕೂಡ ಎಲ್ಲರೂ ನಮ್ ಕಾಲನ್ನ ಎಳೀತಾರೆ ಅಂತಲ್ಲ. ಕೆಲವರು ಯಾವಾಗಲೂ ನಮ್ ಜೊತೆ ಇದ್ದು ಸಪೋರ್ಟ್ ಮಾಡ್ತಾರೆ,ನಮ್ ಲೈಫ್ ಬೂಸ್ಟರ್ ತರ ಇರ್ತಾರೆ. ಇನ್ನೂಕೆಲವರು ನಮಗೆ ತೊಂದರೆ ಆಗದೆ ಇರಲಿಅಂತ ಆ್ಯಂಟಿವೈರಸ್ ತರ ಕೆಲಸ ಮಾಡ್ತಿರ್ತಾರೆ. ಇಂಥವರನ್ನು ನಮ್ಮ ಲೈಫ್ ಅನ್ನೋ ಮೊಬೈಲ್ ಇರೋವರಗೂ ಜೋಪಾನವಾಗಿಕಾಪಾಡಿಕೊಳ್ಳಬೇಕು. ಇನ್ನೂ ಕೆಲವೊಂದಿಷ್ಟು ಆ್ಯಪ್‌ಗಳು ಇರ್ತಾವೆ.
ಅವುಗಳಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಇರೋದಿಲ್ಲ. ಹಾಗಂತ ಅವುಗಳನ್ನ ಡಿಲೀಟ್ ಕೂಡ ಮಾಡೋಕೆ ಆಗಲ್ಲ, ಯಾಕೆಂದರೆ ಅವು ಇನ್ಬಿಲ್ಟ್ ಆಗಿ ಬಂದಿರ್ತಾವೆ. ಜೀವನದಲ್ಲೂ ಹಾಗೆ, ಕೆಲವು ಜನರ ಜೊತೆಅನಿವಾರ್ಯವಾಗಿ ಇರಬೇಕಾಗುತ್ತದೆ.ಯಾವುದನ್ನು ತೆಗೆದು ಹಾಕೋಕೆ ಸಾಧ್ಯವೋ ತೆಗೆದು ಹಾಕಬೇಕು. ಆಗದೇ ಇರೋದರ ಜೊತೆಗೆ ಬದುಕೋದು ಕಲಿಬೇಕು. ಜೀವನಆಗಲೀ, ಮೊಬೈಲ್ ಆಗಲೀ ಹೇಗೆಕಾರ್ಯನಿರ್ವಹಿಸಬೇಕು ಅನ್ನೋದು ನಮ್‌ಕೈಯಲ್ಲಿಯೇ ಇರುತ್ತೆ. ನಾವು ಅವುಗಳನ್ನಸರಿಯಾಗಿ ನಿಭಾಯಿಸಬೇಕು ಅಷ್ಟೇ. ಅದಕ್ಕಾಗಿಯೇ ನಮ್ಮ ಜೀವನದಲ್ಲಿ ಯಾವುದು ಬೇಕು, ಬೇಡ ಅನ್ನೋದು ನಾವೇ ನಿರ್ಧರಿಸಬೇಕು.
– ಈರಯ್ಯ ಉಡೇಜಲ್ಲಿ,ಹುಬ್ಬಳ್ಳಿ